alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರನೇ ಪತಿ ಎರಡನೇ ಪತ್ನಿಯಿಂದ ಮುಚ್ಚಿಟ್ಟ ಮೊದಲ ಪತ್ನಿ ಸುದ್ದಿ..ಆಮೇಲೆ.?!

ಮಧ್ಯಪ್ರದೇಶದ ಇಂದೋರ್ ನ ಭಾಗಿರಥಪುರದಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷ ಕುಡಿದ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿ ಪತಿ ಓಡಿ ಹೋಗಿದ್ದ.ಚಿಕಿತ್ಸೆ ಯಶಸ್ವಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ. ಆತ್ಮಹತ್ಯೆಗೆ ಕಾರಣ ಆಶ್ಚರ್ಯ ಹುಟ್ಟಿಸುವಂತಿದೆ.

ಮೃತ ಮಹಿಳೆ ರೇಖಾಗೆ ಇದು ಮೂರನೇ ಮದುವೆ. ಸೂರತ್ ನಿವಾಸಿಯನ್ನು ಮೊದಲು ಮದುವೆಯಾಗಿದ್ದಳಂತೆ. ಒಂದು ವರ್ಷದಲ್ಲಿ ವಿಚ್ಛೇದನ ಪಡೆದು ನಂತ್ರ ಶಿವರಾಜ್ ಚೌಹಾಣ್ ಎಂಬಾತನನ್ನು ಮದುವೆಯಾಗಿದ್ದಳಂತೆ.ಮೂರು ವರ್ಷ ಸಂಸಾರ ಮಾಡಿದ್ದ ಇಬ್ಬರ ಮಧ್ಯೆ ವಿವಾದ ಶುರುವಾಗಿತ್ತು. ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದ.

ನಂತ್ರ ರೇಖಾಗೆ ಉಮೇಶ್ ಪರಿಚಯವಾಗಿದ್ದ. ಆರು ತಿಂಗಳ ಹಿಂದೆ ಇಬ್ಬರು ಪ್ರೇಮ ವಿವಾಹವಾಗಿದ್ದರು. ಆದ್ರೆ ಒಂದು ತಿಂಗಳ ಹಿಂದೆ ಉಮೇಶ್ ಗೆ ಮೊದಲೇ ಮದುವೆಯಾಗಿದೆ. ಮೂವರು ಮಕ್ಕಳಿದ್ದಾರೆಂಬ ಸಂಗತಿ ರೇಖಾಗೆ ಗೊತ್ತಾಗಿದೆ. ಇದ್ರಿಂದ ಕೋಪಗೊಂಡು ತಾಯಿ ಮನೆಗೆ ಬಂದಿದ್ದ ರೇಖಾ ಮಗಳು ಶಾಲೆಗೆ ಹೋದಾಗ ವಿಷ ಸೇವಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...