alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಿದ ಸಿಬ್ಬಂದಿ ಸಸ್ಪೆಂಡ್

default

ಅರಣ್ಯ ಇಲಾಖೆಯ ಫಾರೆಸ್ಟ್, ಗಾರ್ಡ್ ಪರೀಕ್ಷೆ ವೇಳೆ ಉದಾಸೀನತೆ ತೋರಿರುವುದು ಬೆಳಕಿಗೆ ಬಂದಿದೆ. ರಾಜಸ್ತಾನದ ಚಿತ್ತೋರಗಢದಲ್ಲಿ ಮಹಿಳೆ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯನ್ನು ಪುರುಷ ಸಿಬ್ಬಂದಿ ನಡೆಸಿದ್ದಾರೆ.

ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಸಾರವಾಗ್ತಿದ್ದಂತೆ ವಿರೋಧಗಳು ವ್ಯಕ್ತವಾದ್ವು. ಮಧ್ಯಪ್ರವೇಶಿಸಿದ ಅರಣ್ಯ ಸಚಿವರು ಸಿಬ್ಬಂದಿಯನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ವೈದ್ಯರ ಸೂಚನೆ ಹಿನ್ನೆಲೆಯಲ್ಲಿ ಪುರುಷ ಸಿಬ್ಬಂದಿ ದೈಹಿಕ ಪರೀಕ್ಷೆ ನಡೆಸಿದ್ದಾರೆಂದು ಇದೇ ವೇಳೆ ಸಚಿವರು ಸಬೂಬು ಹೇಳಿದ್ದಾರೆ.

57 ಹುದ್ದೆಗಳಿಗೆ ಜನವರಿ 10 ರಂದು ಲಿಖಿತ ಪರೀಕ್ಷೆ ನಡೆದಿತ್ತು. ಅದ್ರಲ್ಲಿ ಪಾಸಾದ 1512 ಅಭ್ಯರ್ಥಿಗಳಿಗೆ ಈ ತಿಂಗಳ 16ರಿಂದ ದೈಹಿಕ ಪರೀಕ್ಷೆ ನಡೆಯುತ್ತದೆ. ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಉಪಸ್ಥಿತರಿದ್ದರೂ ಪುರುಷ ಸಿಬ್ಬಂದಿ ಮಹಿಳಾ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಿದ್ದಾರೆ. ಮೊದಲು ಆರೋಪವನ್ನು ತಳ್ಳಿಹಾಕಿದ ಅರಣ್ಯ ಅಧಿಕಾರಿಗಳು ನಂತರ ಒಪ್ಪಿಕೊಂಡಿದ್ದಾರೆ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...