alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ ಮೊದಲ ದಿನವೇ ನಾಪತ್ತೆಯಾದ ಪತಿಯಿಂದ ಬಂತು ಈ ಪತ್ರ

ತ್ರಿವಳಿ ತಲಾಕ್ ಗೆ ನಿಷೇಧ ಹೇರಲಾಗಿದೆ. ಆದ್ರೂ ದೇಶದಲ್ಲಿ ತ್ರಿವಳಿ ತಲಾಕ್ ಘಟನೆ ನಡೆಯುತ್ತಲೇ ಇದೆ. ಜೋದ್ಪುರದಲ್ಲಿ ಇನ್ನೊಂದು ಘಟನೆ ನಡೆದಿದೆ. ಮದುವೆಯಾದ ಮರುದಿನವೇ ನಾಪತ್ತೆಯಾದ ಪತಿ, ಪತ್ನಿಗೆ ಪತ್ರದ ಮೂಲಕ ತಲಾಕ್ ನೀಡಿದ್ದಾನೆ.

ಘಟನೆ ದೇವಿ ರಸ್ತೆಯಲ್ಲಿ ನಡೆದಿದೆ. ರೋಹಿನಾ ಎಂಬಾಕೆಯ ಮದುವೆ ಜುಲೈ 4 ರಂದು ನಡೆದಿತ್ತು. ಜುಲೈ 5 ರಂದು ಪತಿ ನಾಪತ್ತೆಯಾಗಿದ್ದಾನೆ. ಮದುವೆಯಾಗಿ ಸುಂದರ ಬದುಕಿನ ಕನಸು ಕಂಡಿದ್ದ ರೋಹಿನಾ ಬದುಕು ಮರುದಿನವೇ ನುಚ್ಚು ನೂರಾಗಿದೆ. ಮಗ ಓಡಿ ಹೋಗಿದ್ದಾನೆಂದು ಹುಡುಗನ ಮನೆಯವರು ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದರಂತೆ.

ನಾಪತ್ತೆಯಾಗಿದ್ದ ಪತಿಯಿಂದ ಕೆಲ ದಿನಗಳ ನಂತ್ರ ಪತ್ರವೊಂದು ಬಂದಿದೆ. ಅದ್ರಲ್ಲಿ ತಲಾಕ್ ಎಂದು ಮೂರು ಬಾರಿ ಬರೆದಿತ್ತು ಎನ್ನಲಾಗಿದೆ. ಇದ್ರಿಂದ ಹುಡುಗಿ ಮನೆಯವರು ಕಂಗಾಲಾಗಿದ್ದಾರೆ. ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಸೂಚನೆ ಮೇರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ರೋಹಿನಾ ಪತಿ, ಅತ್ತೆ, ಮಾವನ ಬಂಧನಕ್ಕೆ ಯತ್ನ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...