alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನಿಗೆ ಹೆಸರಿಡಲು ಚುನಾವಣೆ ನಡೆಸಿದ ದಂಪತಿ…!

ಸಾಮಾನ್ಯವಾಗಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆ ನಡೆದಿರುವುದನ್ನು ಕೇಳಿರುವ ಮಧ್ಯೆ ಇಲ್ಲೊಂದು ವಿಶಿಷ್ಟ ‘ಚುನಾವಣೆ’ ನಡೆದಿದೆ. ತಮ್ಮ ಮಗನಿಗೆ ನಾಮಕರಣ ಮಾಡಲು ಮುಂದಾದ ದಂಪತಿ, 3 ಹೆಸರುಗಳು ಶಿಫಾರಸ್ಸುಗೊಂಡ ಕಾರಣ ಇದರಲ್ಲಿ ಒಂದನ್ನು ಆಯ್ಕೆ ಮಾಡಲು ಚುನಾವಣೆ ನಡೆಸಿದ್ದಾರೆ.

ಈ ಚುನಾವಣೆ ಮಹಾರಾಷ್ಟ್ರದ ಗೊಂಡಿಯ ಜಿಲ್ಲೆಯಲ್ಲಿ ನಡೆದಿದ್ದು, ವೃತ್ತಿಯಲ್ಲಿ ಉದ್ಯಮಿಯಾಗಿರುವ ಮಿಥುನ್ ಹಾಗೂ ಅವರ ಪತ್ನಿ ಮಾನಸಿ, ಏಪ್ರಿಲ್ 5 ರಂದು ಜನಿಸಿದ್ದ ತಮ್ಮ ಪುತ್ರನಿಗೆ ನಾಮಕರಣ ಮಾಡಲು ಜೂನ್ 15 ರಂದು ಚುನಾವಣೆ ನಡೆಸಿದ್ದಾರೆ.

ಕುಟುಂಬಸ್ಥರು, ಸ್ನೇಹಿತರು ಹಾಗೂ ಕೆಲ ಜನಪ್ರತಿನಿಧಿಗಳು ಈ ಚುನಾವಣೆಯ ಮತದಾರರಾಗಿದ್ದು ವಿಶೇಷ. ಮಿಥುನ್ ಹಾಗೂ ಮಾನಸಿ ಅವರ ಪುತ್ರನಿಗೆ ಯುವಾನ್, ಯಕ್ಷ್ ಹಾಗೂ ಯುವಿಕ್ ಎಂಬ ಹೆಸರುಗಳು ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ಶಿಫಾರಸ್ಸುಗೊಂಡಿದ್ದವು.

ಇವುಗಳಲ್ಲೊಂದನ್ನು ಆಯ್ಕೆ ಮಾಡುವ ಸಂದಿಗ್ಧತೆಗೆ ಸಿಲುಕಿದ ದಂಪತಿ, ಕಡೆಗೆ ಚುನಾವಣೆ ನಡೆಸಲು ತೀರ್ಮಾನಿಸಿದ್ದಾರೆ. ಈ ಮೂರು ಹೆಸರುಗಳನ್ನು ಒಳಗೊಂಡ ಬ್ಯಾಲೆಟ್ ಸಿದ್ಧಪಡಿಸಿದ್ದು, ಮತದಾನದ ಬಳಿಕ ಫಲಿತಾಂಶದಲ್ಲಿ 92 ಮತ ಗಳಿಸಿದ ಯುವಾನ್ ಹೆಸರು ಅಂತಿಮಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...