alex Certify
ಕನ್ನಡ ದುನಿಯಾ       Mobile App
       

Kannada Duniya

”ಬಿಜೆಪಿ ಮುಖಂಡರು ಪಾಶ್ಚಾತ್ಯ ಉಡುಪು, ಮದ್ಯ ಬಳಸದಂತೆ ನಿಷೇಧಿಸಿ”

ಬಿಜೆಪಿ ಮುಖಂಡ ಸುಬ್ರಮಣ್ಯನ್ ಸ್ವಾಮಿ ಪಕ್ಷದ ನಾಯಕರಲ್ಲಿ ಮತ್ತಷ್ಟು ಶಿಸ್ತಿನ ಅವಶ್ಯಕತೆ ಇದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ. ಕೇಸರಿ ಪಕ್ಷದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಬೇಡ ಅನ್ನೋದು ಅವರ ಸಲಹೆ. ಇದಕ್ಕಾಗಿ ಪಾಶ್ಚಾತ್ಯ ಉಡುಪುಗಳು ಮತ್ತು ಮದ್ಯವನ್ನು ಬಿಜೆಪಿಯಲ್ಲಿ ನಿಷೇಧಿಸಬೇಕು ಅಂತಾ ಒತ್ತಾಯ ಮಾಡಿದ್ದಾರೆ.

ಬಿಜೆಪಿ ಎಲ್ಲಾ ಸಚಿವರುಗಳು ಪರಿಸರ ಸ್ನೇಹಿ ಬಟ್ಟೆಗಳನ್ನು ಧರಿಸಬೇಕು. ಪಕ್ಷದ ಶಿಸ್ತಿನ ಒಂದು ಭಾಗವಾಗಿ ಮದ್ಯವನ್ನು ನಿಷೇಧಿಸಬೇಕು ಅಂತಾ ಟ್ವೀಟ್ ಮಾಡಿದ್ದಾರೆ. ಸಂಸತ್ ನಲ್ಲಿ ನಡೆದ ಮದನ್ ಮೋಹನ್ ಮಾಳವಿಯಾ ಹುಟ್ಟುಹಬ್ಬ ಆಚರಣೆ ವೇಳೆ ಗೈರಾದ ಎನ್ ಡಿ ಎ ಸಚಿವರ ಬಗ್ಗೆಯೂ ಸುಬ್ರಮಣ್ಯನ್ ಸ್ವಾಮಿ ಅಸಮಾಧಾನ ಹೊರಹಾಕಿದ್ದರು.

ಅದರ ಬೆನ್ನಲ್ಲೇ ಪಕ್ಷದಲ್ಲಿ ಶಿಸ್ತಿಗೆ ಅಗತ್ಯವಿದೆ ಅಂತಾ ಟ್ವೀಟ್ ಮಾಡಿದ್ದಾರೆ. ಭಾರತವು ಇನ್ನೂ ಬ್ರಿಟಿಷ್ ಸಾಮ್ರಾಜ್ಯಶಾಹಿ ಹೇರಿಕೆಯ ಗುಲಾಮಗಿರಿಯಲ್ಲೇ ಇದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...