alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಬಿಜೆಪಿಯ ದೊಡ್ಡ ಪ್ಲಾನ್

2019 ರ ಲೋಕಸಭೆ ಚುನಾವಣೆಯ ಬಿಜೆಪಿ ರಣತಂತ್ರವೊಂದು ಬಹಿರಂಗವಾಗಿದೆ. ಲೋಕಸಭೆ ಗೆಲುವಿನ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಬಿಜೆಪಿ ಮಹತ್ವದ ಹೆಜ್ಜೆಯಿಡಲು ಮುಂದಾಗಿದೆ. ಮಾಹಿತಿ ಪ್ರಕಾರ 2019 ರ ಚುನಾವಣೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಉಮಾ ಭಾರತಿ, ರಾಧಾ ಮೋಹನ್ ಸಿಂಗ್ ಸೇರಿದಂತೆ 150 ಸಂಸದರು ಟಿಕೆಟ್ ಕಳೆದುಕೊಳ್ಳುವ ಸಾಧ್ಯತೆಯಿದೆ. ಇದ್ರಲ್ಲಿ ಕೆಲ ಮಂತ್ರಿಗಳ ಹೆಸರಿದೆ ಎಂದು ಮೂಲಗಳು ಹೇಳಿವೆ. ಟಿಕೆಟ್ ನೀಡದಿರಲು ಬೇರೆ ಬೇರೆ ಕಾರಣಗಳಿವೆಯಂತೆ.

ಅನಾರೋಗ್ಯದ ಕಾರಣ ಹೇಳಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟಿಕೆಟ್ ಗೆ ಕತ್ತರಿ ಬೀಳಲಿದೆ. ಜಲ ಸಂಪನ್ಮೂಲ ಸಚಿವ ಉಮಾ ಭಾರತಿ, ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಮುಂದಿನ ಚುನಾವಣೆಯಲ್ಲಿ ಹೋರಾಡಲು ಬಯಸುವುದಿಲ್ಲವೆಂದು ಪಕ್ಷಕ್ಕೆ ಹೇಳಿದ್ದಾರೆ. ಹಾಗಾಗಿ ಇವ್ರೆಲ್ಲರ ಟಿಕೆಟ್ ಗೆ ಕತ್ತರಿ ಬೀಳಲಿದೆ.

ಟಿಕೆಟ್ ಗೆ ಕತ್ತರಿ ಬೀಳುವವರಲ್ಲಿ ಉತ್ತರ ಪ್ರದೇಶ, ಬಿಹಾರ್ ಹಾಗೂ ಮಧ್ಯಪ್ರದೇಶದ ನಾಯಕರ ಹೆಸರೇ ಹೆಚ್ಚಿದೆ. ಚುನಾವಣೆ ಗೆಲುವು ಬಿಜೆಪಿಗೆ ಮುಖ್ಯವಾಗಿದೆ. ಗೆಲುವಿಗಾಗಿ ರಣತಂತ್ರ ಶುರುವಾಗಿದೆ. ಯಾರಿಗೆ, ಎಲ್ಲಿ ಟಿಕೆಟ್ ಎನ್ನುವ ವಿಶ್ಲೇಷಣೆ ನಡೆಯುತ್ತಿದೆ. 150 ಹೊಸ ಅಭ್ಯರ್ಥಿಗಳಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...