alex Certify
ಕನ್ನಡ ದುನಿಯಾ       Mobile App
       

Kannada Duniya

ಪೂಜಾ ಭಟ್ ಪ್ರೀತಿಗೆ ಶಿಕ್ಷೆ – 24 ವರ್ಷದಿಂದ ಜೈಲಿನಲ್ಲಿದ್ದಾನೆ ಅಬ್ದುಲ್

pooja

1992 ರಲ್ಲಿ ಸಮಯದಲ್ಲಿ ಪೂಜಾ ಭಟ್ ಬಾಲಿವುಡ್ ನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ಆ ವೇಳೆ ತೆರೆಗೆ ಬಂದ ‘ಸಡಕ್’ ಚಿತ್ರ ಸೂಪರ್ ಹಿಟ್ ಆಗಿತ್ತು. ಪೂಜಾ ಭಟ್ ನಟನೆ ನೋಡಿ 21 ವರ್ಷದ ಅಬ್ದುಲ್ ಶರೀಫ್ ಎಂಬಾತ ಕ್ಲೀನ್ ಬೋಲ್ಡ್ ಆಗಿದ್ದ. ಪೂಜಾ ಭಟ್ ಹೆಸರು ಕನವರಿಸುತ್ತಲೇ ಭಾರತಕ್ಕೆ ಬಂದ. ವಿಷಾದ ಅಂದ್ರೆ ಪೂಜಾ ಭಟ್ ಭೇಟಿಯಾಗಲಿಲ್ಲ. ಆದ್ರೆ ಜೈಲಿನ ವಾಸ ಖಾಯಂ ಆಯ್ತು. 24 ವರ್ಷಗಳಿಂದ ಜೈಲಿನಲ್ಲಿದ್ದಾನೆ ಅಬ್ದುಲ್.

ಅಬ್ದುಲ್ ಗೆ ಪೂಜಾ ಭಟ್ ಹುಚ್ಚು ಹಿಡಿದಿತ್ತು. ಆಕೆಯ ಗುಂಗಿನಲ್ಲಿಯೇ ಆತ ವಾಘಾ ಗಡಿ ದಾಟಲು ಮುಂದಾಗಿದ್ದ. ಹಾಗಾಗಿಯೇ ಆತ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ವಾಘಾ ಗಡಿ ದಾಟಿ ಅಕ್ರಮವಾಗಿ ಭಾರತ ಪ್ರವೇಶಿಸಲು ಯತ್ನಿಸುತ್ತಿದ್ದ ಅಬ್ದುಲ್, ಭದ್ರತಾ ಪಡೆ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತನ ವಿಚಾರಣೆ ನಡೆಸಿದ ಕೋರ್ಟ್ 2 ವರ್ಷ ಶಿಕ್ಷೆ ವಿಧಿಸಿತ್ತು.

1994 ರಲ್ಲಿ ಅಬ್ದುಲ್ ಬಿಡುಗಡೆಯಾಗಬೇಕಿತ್ತು. ಆದ್ರೆ ಅಬ್ದುಲ್ ಇನ್ನೂ ಜೈಲಿನಲ್ಲಿಯೇ ಇದ್ದಾನೆ. ಆತ ನೆನಪು ಕಳೆದುಕೊಂಡಿರುವುದೇ ಇದಕ್ಕೆ ಕಾರಣ. ಹೌದು, ಅಬ್ದುಲ್ ಗೆ ತನ್ನ ಊರು, ಮನೆಯ ಬಗ್ಗೆ ನೆನಪಿಲ್ಲ. ಒಮ್ಮೆ ಪಾಕಿಸ್ತಾನ ಅಂದ್ರೆ, ಮತ್ತೊಮ್ಮೆ ಇರಾನ್ ಎನ್ನುತ್ತಿದ್ದಾನೆ. ಅಲ್ಲಿಯೂ ಈತನ ಪರಿವಾರದವರನ್ನು ಹುಡುಕುವ ಪ್ರಯತ್ನ ಮಾಡಿದೆ ಸೇನೆ. ಆದ್ರೆ ಯಾವುದೂ ಪ್ರಯೋಜನವಾಗಲಿಲ್ಲ. ಹಾಗಾಗಿ ಈಗಲೂ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದಾನೆ.

ಆತನಿಗೆ ಈಗ ಇಬ್ಬರ ಹೆಸರು ಮಾತ್ರ ನೆನಪಿದೆ. ಒಂದು ತಂದೆ ಹೆಸರು. ಇನ್ನೊಂದು ಪೂಜಾ ಭಟ್ ಹೆಸರು. ಈಗಲೂ ಪೂಜಾ ಭಟ್ ಗೆ ಪ್ರಪೋಸ್ ಮಾಡುತ್ತಿರುವ ಆತನ ಎಡಗೈ ಮೇಲೆ ಪೂಜಾ ಹೆಸರಿನ ಹಚ್ಚೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...