alex Certify
ಕನ್ನಡ ದುನಿಯಾ       Mobile App
       

Kannada Duniya

ನಾಮಪತ್ರ ಸಲ್ಲಿಕೆಗೆ 10 ಸಾವಿರ ನಾಣ್ಯ ತಂದ ಭೂಪ…!

ಮಧ್ಯಪ್ರದೇಶದಲ್ಲಿ ದಿನದಿಂದ ದಿನಕ್ಕೆ ‌ಚುನಾವಣಾ ರಂಗು ಏರುತ್ತಿದ್ದರೆ, ಇತ್ತ ಅಭ್ಯರ್ಥಿಯೊಬ್ಬ ನಾಮಪತ್ರ ಸಲ್ಲಿಸುವ ವೇಳೆ ಇಡುವ ಠೇವಣಿಗೆಂದು 10 ಸಾವಿರ ನಾಣ್ಯ ತರುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಇಂದೋರ್ – 3 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ದೀಪಕ್ ಪವಾರ್ ಈ ರೀತಿ ನಾಣ್ಯವನ್ನು ನಾಮಪತ್ರ ಸಲ್ಲಿಕೆ ವೇಳೆ ನೀಡಿದ್ದು, ಜನರಿಂದ ದೇಣಿಗೆ ಎತ್ತುವಾಗ ಜನರು ನೋಟ್ ಬದಲು ನಾಣ್ಯ ನೀಡಿದ್ದರಿಂದ ಅದೇ ಹಣವನ್ನು ಚುನಾವಣಾಧಿಕಾರಿಗಳಿಗೆ ನೀಡಿದ್ದೇನೆ ಎಂದಿದ್ದಾರೆ‌.

ಇಂದೋರ್ ನಲ್ಲಿ ವಕೀಲರಾಗಿರುವ ಪವಾರ್ ಅವರು ಸ್ವರ್ಣಿಮ್ ಭಾರತ್ ಇನ್ಕ್ಯೂಬಲ್ ಪಕ್ಷದ ಅಭ್ಯರ್ಥಿಯಾಗಿ ಮೊದಲ‌ ಬಾರಿಗೆ ಸ್ಪರ್ಧಿಸಿದ್ದಾರೆ. ಜನರಿಂದ ಒಂದು ರೂಪಾಯಿ ದೇಣಿಗೆ ಪಡೆದು, ಠೇವಣಿ ಹಣ ಇರಿಸಿರುವುದರಿಂದ ಈ ರೀತಿ ನಾಣ್ಯವನ್ನು ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

ಪವಾರ್ ಅವರು ನೀಡಿದ 10 ಸಾವಿರ ಮೌಲ್ಯದ ಒಂದು ರೂ. ನಾಣ್ಯವನ್ನು ಎಣಿಸುವುದಕ್ಕಾಗಿ, ಚುನಾವಣಾಧಿಕಾರಿ ಐದು ಸಿಬ್ಬಂದಿಯನ್ನು ನೇಮಿಸಿದ್ದು, ಈ‌ ಐವರು ನಾಣ್ಯ ಎಣಿಸಲು ಸುಮಾರು 90 ನಿಮಿಷ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ‌.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...