alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರ್ಯಾಕ್ಟರ್ ಜಫ್ತಿಯಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ರೈತ

suicide by poison

ರೈತನೊಬ್ಬ ತಾನು ಮಾಡಿದ ಸಾಲದ ಪೈಕಿ ಬಹಳಷ್ಟು ತೀರಿಸಿದ್ದರೂ ಬಾಕಿ ಉಳಿದ ಹಣಕ್ಕಾಗಿ ಹಣಕಾಸು ಸಂಸ್ಥೆಯವರು ಆತನ ಟ್ರ್ಯಾಕ್ಟರ್ ಜಫ್ತಿ ಮಾಡಿದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಮಿಳುನಾಡಿನ ಅರಿಯಾಲೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಳಗಿರಿ ಎಂಬ ರೈತ ಟ್ರ್ಯಾಕ್ಟರ್ ಖರೀದಿಸಲು ಖಾಸಗಿ ಹಣಕಾಸು ಸಂಸ್ಥೆಯಿಂದ 7 ಲಕ್ಷ ರೂ. ಸಾಲ ಪಡೆದುಕೊಂಡಿದ್ದ. ಈ ಪೈಕಿ 5.10 ಲಕ್ಷ ರೂ. ಸಾಲ ತೀರಿಸಿದ್ದು, ಬೆಳೆ ಕೈಕೊಟ್ಟ ಕಾರಣ ಉಳಿದ ಮೊತ್ತ ಪಾವತಿಸಲು ಸಮಯಾವಕಾಶ ಕೇಳಿದ್ದ.

ಆದರೂ ಹಣಕಾಸು ಸಂಸ್ಥೆಯವರು ಟ್ರ್ಯಾಕ್ಟರ್ ಜಫ್ತಿ ಮಾಡಿಕೊಂಡು ಹೋಗಿದ್ದು, ಇದರಿಂದ ಅವಮಾನಿತನಾದ ಅಳಗಿರಿ ಕ್ರಿಮಿನಾಶಕ ಸೇವಿಸಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಹಣಕಾಸು ಸಂಸ್ಥೆ ಟ್ರ್ಯಾಕ್ಟರ್ ಜಫ್ತಿ ಮಾಡಿದ್ದಕ್ಕೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...