alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಪತ್ರೆಗೆ ದಾಖಲಾದ ಕರುಣಾನಿಧಿ: ಐಸಿಯುವಿನಲ್ಲಿ ಮುಂದುವರೆದ ಚಿಕಿತ್ಸೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಕರುಣಾನಿಧಿಯವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂತ್ರದ ಸೋಂಕಿನಿಂದ ಬಳಲುತ್ತಿರುವ ಕರುಣಾನಿಧಿಯವರಿಗೆ ಐಸಿಯು ವಿನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಗುರುವಾರ ಅವ್ರ ಆರೋಗ್ಯದಲ್ಲಿ ಏರುಪೇರಾಗಿತ್ತು. ಕಾವೇರಿ ಆಸ್ಪತ್ರೆ ವೈದ್ಯರು ಕರುಣಾನಿಧಿ ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದರು. ಆದಷ್ಟು ಬೇಗ ಗುಣಮುಖರಾಗ್ತಾರೆಂಬ ಭರವಸೆ ನೀಡಿದ್ದರು. ಆದ್ರೆ ಶುಕ್ರವಾರ ರಾತ್ರಿ ಬಿಪಿ ಇಳಿದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ಕರುಣಾನಿಧಿ ಮನೆ ಹಾಗೂ ಆಸ್ಪತ್ರೆ ಮುಂದೆ ಬೆಂಬಲಿಗರ ದಂಡೇ ನೆರೆದಿದೆ. ಈ ಕಾರಣಕ್ಕೆ ಎರಡೂ ಕಡೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಕರುಣಾನಿಧಿ ಆರೋಗ್ಯ ವಿಚಾರಿಸಿ ಅನೇಕ ನಾಯಕರು ಕರೆ ಮಾಡಿದ್ದಾರೆ. ಕೆಲ ನಾಯಕರು ಕರುಣಾನಿಧಿ ಮನೆಗೆ ಭೇಟಿ ನೀಡಿದ್ದಾರೆ. ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಶೀಘ್ರವೇ ಅವ್ರು ಚೆನ್ನೆಗೆ ಬರಲಿದ್ದಾರೆ ಎಂಬ ಮಾಹಿತಿಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...