alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ಆದ್ರೂ ನಿಜ ! ನಂಬಲೇಬೇಕು

4862CC1F82B00000578-3247851-image-m-2_1443194432629

ಮನುಷ್ಯ ಸೇರಿದಂತೆ ಎಲ್ಲಾ ಪ್ರಾಣಿಗಳಿಗೂ ಮೆದುಳು ಬಹುಮುಖ್ಯ ಅಂಗ. ಅದರಿಂದಲೇ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಒಂದು ಹುಲ್ಲುಕಡ್ಡಿಯನ್ನು ತೆಗೆದಿಡಲು ಕೂಡ ಮೆದುಳಿನಿಂದ ಸಂದೇಶ ಬರಬೇಕಿದೆ.

ಆದರೆ, ಮೆದುಳೇ ಇಲ್ಲದೇ ಬದುಕುತ್ತಿರುವ ಮಗುವಿನ ಕುರಿತಂತೆ ಇಡೀ ವೈದ್ಯಕೀಯ ಲೋಕವೇ ಅಚ್ಚರಿಯ ಕಣ್ಣಿನಿಂದ ನೋಡುತ್ತಿದೆ. ಫ್ಲೋರಿಡಾದಲ್ಲಿರುವ ಎರಡು ವರ್ಷದ ಈ ಪುಟಾಣಿಯ ಹೆಸರು ಜಾಕ್ಸನ್. ಈತನಿಗೆ ಮೆದುಳೇ ಇಲ್ಲವಂತೆ. ವಿಜ್ಞಾನ ಲೋಕದಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿಗಳು ನಡೆಯುತ್ತವೆ. ಅದೇ ರೀತಿ, ಈ ಜಾಕ್ಸನ್ ಕತೆಯೂ ಕೂಡ. ಈತ ಜನಿಸಿದ ಸಂದರ್ಭದಲ್ಲಿ ಮೆದುಳು ಇಲ್ಲದ ಕಾರಣ ಮಗು ಉಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದರಂತೆ.

ಆದರೆ, ಅದೆಲ್ಲವನ್ನೂ ಮೀರಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾನೆ ಜಾಕ್ಸನ್. ತಲೆ ಚಪ್ಪಟೆ, ಚೌಕಾಕಾರದಲ್ಲಿರುವ ಜಾಕ್ಸನ್ ಗೆ ತಲೆಯಲ್ಲಿ ಮೆದುಳಿಲ್ಲ, ಮೆದುಳಿಗೆ ಸಂಬಂಧಿಸಿದ ಕೆಲವು ಜೀವಕೋಶಗಳು ಇವೆ ಅಷ್ಟೇ. ಆದರೂ ಎಲ್ಲರಂತೆ ಆರಾಮಾಗಿ ಬದುಕುತ್ತಿರುವ ಜಾಕ್ಸನ್, ಪೋಷಕರಿಗೆ ಹೊಸ ಭರವಸೆ ಮೂಡಿಸಿದ್ದಾನೆ. ಜೊತೆಗೆ ವೈದ್ಯಕೀಯ ಲೋಕಕ್ಕೂ ಅಚ್ಚರಿಯಾಗಿದ್ದಾನೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...