alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗದಲ್ಲಿ ನಾಪತ್ತೆಯಾದ ಅಭ್ಯರ್ಥಿ, ದೂರು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೊರಬ ವಿಧಾನಸಭೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ಹೆಚ್.ಬಿ. ಗಂಗಾಧರಪ್ಪ ಹುಣವಳ್ಳಿ ನಾಪತ್ತೆಯಾಗಿದ್ದಾರೆ.

ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟುಹೋಗಿರುವ ಗಂಗಾಧರಪ್ಪ ಅವರಿಗಾಗಿ 2 ದಿನಗಳಿಂದ ಹುಡುಕಾಟ ನಡೆಸಿದ ಪಕ್ಷದ ಮುಖಂಡರು, ಸೊರಬ ಠಾಣೆಗೆ ದೂರು ನೀಡಿದ್ದಾರೆ. 3 ಸಲ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಗಂಗಾಧರಪ್ಪ 1 ಬಾರಿ ಜಿ.ಪಂ. ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಬಿ.ಜೆ.ಪಿ.ಯಲ್ಲಿದ್ದ ಗಂಗಾಧರಪ್ಪ ಇತ್ತೀಚೆಗೆ ಪಕ್ಷವನ್ನು ತೊರೆದು ಸ್ವರಾಜ್ ಇಂಡಿಯಾ ಪಕ್ಷದಿಂದ ಸ್ಪರ್ಧಿಸಿದ್ದರು. ಅವರ ಕುಟುಂಬದ ಮೇಲೆ ಒತ್ತಡ ಹೇರಿ ಗಂಗಾಧರಪ್ಪರನ್ನು ಬೇರೆ ಕಡೆ ಕಳಿಸಲಾಗಿದೆ ಎನ್ನಲಾಗಿದೆ.

ಪಕ್ಷದ ಮುಖಂಡರು ಸೊರಬ ಠಾಣೆಗೆ ದೂರು ನೀಡಿ ಗಂಗಾಧರಪ್ಪ ಅವರನ್ನು ಪತ್ತೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...