alex Certify ಸೆರೆ ಸಿಕ್ಕ ಬರೋಬ್ಬರಿ 19 ಅಡಿ ಉದ್ದದ ಹೆಬ್ಬಾವು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆರೆ ಸಿಕ್ಕ ಬರೋಬ್ಬರಿ 19 ಅಡಿ ಉದ್ದದ ಹೆಬ್ಬಾವು: ವಿಡಿಯೋ ವೈರಲ್

ಕ್ಯಾಂಪೇನಿಯಾದ ನೇಪಲ್ಸ್​ ಮೂಲದ ಬೇಟೆಗಾರ ಜೇಕ್​ ವಾಲೆರಿ ತಮ್ಮ ಸಹಾಯಕರ ಸಹಾಯದಿಂದ ಅತ್ಯಂತ ಉದ್ದ ಹಾಗೂ ಭಾರವಾದ ಬರ್ಮಿಸ್​ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಮಾಧ್ಯಮಗಳು ಮಾಡಿದ ವರದಿಗಳ ಪ್ರಕಾರ ಈ ಹಾವು 19 ಅಡಿ ಉದ್ದ ಹಾಗೂ 56.6 ಕೆಜಿ ತೂಕವನ್ನು ಹೊಂದಿತ್ತು ಎನ್ನಲಾಗಿದೆ. 2020ರ ಅಕ್ಟೋಬರ್​ ತಿಂಗಳಲ್ಲಿ ಫ್ಲೋರಿಡಾದಲ್ಲಿ 18 ಅಡಿ ಉದ್ದ ಹಾಗೂ 9 ಇಂಚಿನ ಬರ್ಮಿಸ್​ ಹೆಬ್ಬಾವನ್ನು ಸೆರೆ ಹಿಡಿಯಲಾಗಿತ್ತು.

ಈ ವಿಡಿಯೋವನ್ನು 22 ವರ್ಷದ ವಿದ್ಯಾರ್ಥಿಯೊಬ್ಬರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಯಸ್ಕ ಜಿರಾಫೆಯಷ್ಟು ಉದ್ದರವಿರುವ ಈ ಹಾವಿನ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಈಸ್ಟರ್ನ್​ ಕೋಲಿಯರ್​​ ಕೌಂಟಿಯ ಬಿಗ್​ ಸಪ್ರೈಸ್​ ನ್ಯಾಷನಲ್​ ಪ್ರಿಸರ್ವ್​ನಲ್ಲಿ ಈ ಹೆಬ್ಬಾವನ್ನು ಹಿಡಿಯಲಾಗಿದೆ.

ವೃತ್ತಿಪರ ಹೆಬ್ಬಾವು ತಜ್ಞರಾಗಿರುವ ಕೆವ್​ ಪಾವ್​, ಹಳೆಯ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿರುವ ನಿಮ್ಮನ್ನು ಅಭಿನಂದಿಸಲು ನನಗೆ ಖುಷಿಯಾಗುತ್ತಿದೆ ಎಂದಿದ್ದಾರೆ.

Jake Waleri, right, and Stephen Gauta transport a record 19 foot Burmese python, Wednesday, July 12 , 2023.caught in the Big Cypress National Preserve on July 10, 2023. Waleri, who is an amateur hunter and several friends caught the large snake. They brought it to the Conservancy of Southwest Florida to have it officially documented.

Jake Waleri, right, and Stephen Gauta transport a record 19 foot Burmese python, Wednesday, July 12 , 2023.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...