alex Certify
ಕನ್ನಡ ದುನಿಯಾ       Mobile App
       

Kannada Duniya

ಯತೀಂದ್ರ, ಬೋಸ್ ಗೆ ಚಾನ್ಸ್: ಹರ್ಷ ಮೊಯ್ಲಿಗಿಲ್ಲ ಟಿಕೆಟ್

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವ ಹೆಚ್.ಸಿ. ಮಹದೇವಪ್ಪ ಅವರ ಪುತ್ರರಿಗೆ ಅವಕಾಶ ಸಿಗಲಿದೆ. ಆದರೆ, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರಿಗೆ ಟಿಕೆಟ್ ನೀಡಲಾಗ್ತಿಲ್ಲ.

ಕಾರ್ಕಳ ವಿಧಾನಸಭೆ ಕ್ಷೇತ್ರದಿಂದ ಹರ್ಷ ಮೊಯ್ಲಿ ಅವರು ಆಕಾಂಕ್ಷಿಯಾಗಿದ್ದು, ವೀರಪ್ಪಮೊಯ್ಲಿ ಅವರೇ ಪುತ್ರನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದರು. ಆದರೆ, ಟ್ವೀಟ್ ಪ್ರಕರಣ ಕಾರಣಕ್ಕೆ ಹರ್ಷ ಮೊಯ್ಲಿ ಚುನಾವಣೆಯಿಂದ ದೂರ ಉಳಿಯಲಿದ್ದಾರೆ. ಅವರಿಗೆ ಟಿಕೆಟ್ ಬೇಡವೆಂದು ಮೊಯ್ಲಿಯವರೇ ತಿಳಿಸಿರುವುದಾಗಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಖಚಿತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಚಿವ ಮಹದೇವಪ್ಪ ಹಾಗೂ ಅವರ ಪುತ್ರರಿಗೂ ಟಿಕೆಟ್ ನೀಡಲಾಗ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಸಿ.ಎಂ. ಸಿದ್ಧರಾಮಯ್ಯ, ವರುಣಾ ಕ್ಷೇತ್ರದಿಂದ ಅವರ ಪುತ್ರ ಡಾ. ಯತೀಂದ್ರ ಸ್ಪರ್ಧಿಸಲಿದ್ದಾರೆ. ಸಿ.ವಿ. ರಾಮನ್ ನಗರ ಕ್ಷೇತ್ರದಿಂದ ಮಹದೇವಪ್ಪ, ಟಿ. ನರಸೀಪುರದಿಂದ ಸ್ಪರ್ಧಿಸಲು ಅವರ ಪುತ್ರ ಸುನಿಲ್ ಬೋಸ್ ಅವರಿಗೆ ಅವಕಾಶ ನೀಡಲಾಗ್ತಿದೆ.

ಚುನಾವಣಾ ಸಮಿತಿ ಸಭೆಯಲ್ಲಿ ಹಾಲಿ ಶಾಸಕರಿಗೆ, ಜೆ.ಡಿ.ಎಸ್.ನಿಂದ ಬಂದ ಶಾಸಕರಿಗೆ, ಪಕ್ಷೇತರ ಶಾಸಕರಿಗೆ ಹಾಗೂ ಬಿ.ಜೆ.ಪಿ.ಯಿಂದ ಬಂದ ಆನಂದ್ ಸಿಂಗ್ ಅವರ ಹೆಸರನ್ನು ಸಂಭಾವ್ಯರ ಪಟ್ಟಿಯಲ್ಲಿ ಸೇರಿಸಲಾಗಿದೆ. ಏಪ್ರಿಲ್ 2 ರಂದು ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಎ.ಐ.ಸಿ.ಸಿ. ಚುನಾವಣಾ ಸಮಿತಿಗೆ ಕಳಿಸಲಿದ್ದು, ಎ.ಐ.ಸಿ.ಸಿ. ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...