alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆಯಲ್ಲಿ ಆಪ್ತರಿಗೆ ಕೈಕೊಟ್ಟ ಸಿ.ಎಂ. ಸಿದ್ಧರಾಮಯ್ಯ…?

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಪ್ತರಿಬ್ಬರಿಗೆ ಟಿಕೆಟ್ ಕೊಟ್ಟ ಸಿ.ಎಂ. ಸಿದ್ಧರಾಮಯ್ಯ ಪ್ರಚಾರಕ್ಕೆ ಬಾರದೇ ಕೈಕೊಟ್ಟಿದ್ದಾರೆ ಎಂಬ ಮಾತು ಕೇಳಿ ಬಂದಿವೆ.

ಹೊಳೆನರಸೀಪುರ ಕ್ಷೇತ್ರದಲ್ಲಿ ಬಾಗೂರು ಮಂಜೇಗೌಡ ಹಾಗೂ ಸಕಲೇಶಪುರದಲ್ಲಿ ನಿವೃತ್ತ ಅಧಿಕಾರಿ ಸಿದ್ಧಯ್ಯ ಅವರಿಗೆ ಟಿಕೆಟ್ ನೀಡಿದ್ದ ಸಿ.ಎಂ., ಅವರ ಪರವಾಗಿ ಪ್ರಚಾರಕ್ಕೆ ಒಮ್ಮೆಯೂ ಬಂದಿಲ್ಲ.

ಹೊಳೆನರಸೀಪುರದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಜೆ.ಡಿ.ಎಸ್. ಅಭ್ಯರ್ಥಿಯಾಗಿದ್ದು, ಬಾಗೂರು ಮಂಜೇಗೌಡ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಸಿ.ಎಂ. ಕೃಪೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಬಾಗೂರು ಮಂಜೇಗೌಡ ಮತ್ತು ಸಿದ್ಧಯ್ಯ ಅವರಿಗೆ ತೀವ್ರ ಪೈಪೋಟಿ ನಡುವೆಯೂ ಟಿಕೆಟ್ ಕೊಡಿಸಿದ್ದ ಸಿ.ಎಂ. ಒಮ್ಮೆಯೂ ಪ್ರಚಾರಕ್ಕೆ ಬಂದಿಲ್ಲ.

ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಹೊಳೆನರಸೀಪುರ ಮತ್ತು ಸಕಲೇಶಪುರಕ್ಕೆ ಬಾರದ ಸಿ.ಎಂ. ಆಪ್ತರ ಪರ ಪ್ರಚಾರ ನಡೆಸದೇ ಕೈಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...