alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯದ 22 ಮಂದಿ ಸಿ.ಎಂ. ಗಳ ಅಧಿಕಾರಾವಧಿಯ ಸಂಪೂರ್ಣ ಮಾಹಿತಿ

ರಾಜ್ಯದಲ್ಲಿ ಈವರೆಗೂ 22 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಮೈಸೂರು ರಾಜ್ಯದ (1973 ನವೆಂಬರ್ 1 ರಂದು ಕರ್ನಾಟಕ ರಾಜ್ಯ ನಾಮಕರಣ) ಮೊದಲ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಕೆ.ಸಿ. ರೆಡ್ಡಿ 1947 ರ ಅಕ್ಟೋಬರ್ ನಿಂದ 30 ಮಾರ್ಚ್, 1952 ರ ವರೆಗೆ(4 ವರ್ಷ 157 ದಿನ) ಆಡಳಿತ ನಡೆಸಿದ್ದಾರೆ.

2 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಕೆಂಗಲ್ ಹನುಮಂತಯ್ಯ 30 ಮಾರ್ಚ್, 1952 ರಿಂದ 19 ಆಗಸ್ಟ್, 1956 ರ ವರೆಗೆ(4 ವರ್ಷ 142 ದಿನ) ಆಡಳಿತ ನಡೆಸಿದ್ದಾರೆ.

3 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಕಡಿದಾಳ್ ಮಂಜಪ್ಪ 19 ಆಗಸ್ಟ್, 1956 ರಿಂದ 31 ಅಕ್ಟೋಬರ್, 1956 ರ ವರೆಗೆ (73 ದಿನ) ಅಧಿಕಾರದಲ್ಲಿದ್ದರು.

4 ನೇ ಹಾಗೂ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಪಕ್ಷದ ಎಸ್. ನಿಜಲಿಂಗಪ್ಪ 2 ಬಾರಿಗೆ ಸಿ.ಎಂ. ಆಗಿದ್ದರು. 1 ನವೆಂಬರ್, 1956 ರಿಂದ 16 ಮೇ, 1958 ರ ವರೆಗೆ(1 ವರ್ಷ 197 ದಿನ) ಹಾಗೂ 21 ಜೂನ್, 1962 ರಿಂದ 28 ಮೇ, 1968 ರ ವರೆಗೆ(5 ವರ್ಷ,342 ದಿನ) ಅಧಿಕಾರದಲ್ಲಿದ್ದರು

5 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಬಸಪ್ಪ ದಾನಪ್ಪ ಜತ್ತಿ 16 ಮೇ, 1958 ರಿಂದ 9 ಮಾರ್ಚ್, 1962 ರ ವರೆಗೆ (3 ವರ್ಷ 297 ದಿನ) ಆಡಳಿತ ನಡೆಸಿದ್ದರು.

6 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಎಸ್.ಆರ್. ಕಂಠಿ 14 ಮಾರ್ಚ್ 1962 ರಿಂದ 20 ಜೂನ್ 1962 ರವರೆಗೆ(98 ದಿನ) ಆಡಳಿತವನ್ನು ನಡೆಸಿದ್ದಾರೆ.

7 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ವೀರೇಂದ್ರ ಪಾಟೀಲ್ 2 ಬಾರಿ ಸಿ.ಎಂ. ಆಗಿದ್ದರು. 29 ಮೇ 1968 ರಿಂದ 18 ಮಾರ್ಚ್, 1971 ರ ವರೆಗೆ (2 ವರ್ಷ 293 ದಿನ) ಹಾಗೂ 30 ನವೆಂಬರ್, 1989 ರಿಂದ 10 ಅಕ್ಟೋಬರ್ 1990 ರವರೆಗೆ(314 ದಿನ) ಅಧಿಕಾರದಲ್ಲಿದ್ದರು.

8 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಡಿ. ದೇವರಾಜ ಅರಸ್ 2 ಬಾರಿ ಸಿ.ಎಂ. ಆಗಿದ್ದರು 20 ಮಾರ್ಚ್, 1972 ರಿಂದ 31 ಡಿಸೆಂಬರ್, 1977 ರ ವರೆಗೆ (5 ವರ್ಷ 286 ದಿನ) ಹಾಗೂ 28 ಫೆಬ್ರವರಿ 1978 ರಿಂದ 7 ಜನವರಿ 1980 ರವರೆಗೆ(1 ವರ್ಷ 313 ದಿನ) ಅವರು ಮುಖ್ಯಮಂತ್ರಿಯಾಗಿದ್ದರು.

9 ನೇ ಮುಖ್ಯಮಂತ್ರಿಯಾಗಿ ಆರ್. ಗುಂಡೂರಾವ್ 12 ಜನವರಿ, 1980 ರಿಂದ 6 ಜನವರಿ, 1983 ರವರೆಗೆ(2 ವರ್ಷ 359 ದಿನ) ಆಡಳಿತ ನಡೆಸಿದ್ದರು.

10 ನೇ ಮುಖ್ಯಮಂತ್ರಿಯಾಗಿ ಜನತಾ ಪಕ್ಷದ ರಾಮಕೃಷ್ಣ ಹೆಗ್ಡೆ 3 ಬಾರಿ ಸಿ.ಎಂ. ಆಗಿದ್ದರು. 10 ಜನವರಿ, 1983 ರಿಂದ 29 ಡಿಸೆಂಬರ್, 1984 ರವರೆಗೆ (1 ವರ್ಷ 354 ದಿನ), 8 ಮಾರ್ಚ್, 1985 ರಿಂದ 13 ಫೆಬ್ರವರಿ, 1986 ರ ವರೆಗೆ (342 ದಿನ), 16 ಫೆಬ್ರವರಿ, 1986 ರಿಂದ 10 ಆಗಸ್ಟ್, 1988 ರ ವರೆಗೆ (2 ವರ್ಷ, 176 ದಿನ) ಆಡಳಿತ ನಡೆಸಿದ್ದಾರೆ.

11 ನೇ ಮುಖ್ಯಮಂತ್ರಿಯಾಗಿ ಜನತಾ ಪಕ್ಷದ ಎಸ್.ಆರ್. ಬೊಮ್ಮಾಯಿ 13 ಆಗಸ್ಟ್, 1988 ರಿಂದ 21 ಏಪ್ರಿಲ್, 1989 ರ ವರೆಗೆ(281 ದಿನ) ಮುಖ್ಯಮಂತ್ರಿಯಾಗಿದ್ದರು.

12 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಎಸ್. ಬಂಗಾರಪ್ಪ 17 ಅಕ್ಟೋಬರ್, 1999 ರಿಂದ 19 ನವೆಂಬರ್, 1992 ರ ವರೆಗೆ (2 ವರ್ಷ 33 ದಿನ) ಆಡಳಿತ ನಡೆಸಿದ್ದರು.

13 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಎಂ. ವೀರಪ್ಪಮೊಯ್ಲಿ 19 ನವೆಂಬರ್ 1992 ರಿಂದ 11 ಡಿಸೆಂಬರ್ 1994 ರ ವರೆಗೆ(2 ವರ್ಷ 22 ದಿನ) ಅಧಿಕಾರದಲ್ಲಿದ್ದರು.

14 ನೇ ಮುಖ್ಯಮಂತ್ರಿಯಾಗಿ ಜನತಾದಳದ ಹೆಚ್.ಡಿ. ದೇವೇಗೌಡ 11 ಡಿಸೆಂಬರ್, 1994 ರಿಂದ 31 ಮೇ, 1996 ರ ವರೆಗೆ(1 ವರ್ಷ 172 ದಿನ) ಆಡಳಿತ ನಡೆಸಿದ್ದಾರೆ.

15 ನೇ ಮುಖ್ಯಮಂತ್ರಿಯಾಗಿ ಜನತಾದಳದ ಜೆ.ಹೆಚ್. ಪಟೇಲ್ 31 ಮೇ, 1996 ರಿಂದ 7 ಅಕ್ಟೋಬರ್, 1999 ರ ವರೆಗೆ (3 ವರ್ಷ, 129 ದಿನ) ಆಡಳಿತ ನಡೆಸಿದ್ದರು

16 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಎಸ್.ಎಂ. ಕೃಷ್ಣ 11 ಅಕ್ಟೋಬರ್, 1999 ರಿಂದ 28 ಮೇ, 2004 ವರೆಗೆ(4 ವರ್ಷ 230 ದಿನ) ಅಧಿಕಾರದಲ್ಲಿದ್ದರು.

17 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಧರಂಸಿಂಗ್ 28 ಮೇ, 2004 ರಿಂದ 28 ಜನವರಿ, 2006 ರ ವರೆಗೆ (1 ವರ್ಷ 245 ದಿನ) ಆಡಳಿತ ನಡೆಸಿದ್ದರು.

18 ನೇ ಮುಖ್ಯಮಂತ್ರಿಯಾಗಿ ಜೆ.ಡಿ.ಎಸ್. ಪಕ್ಷದ ಹೆಚ್.ಡಿ. ಕುಮಾರಸ್ವಾಮಿ 3 ಫೆಬ್ರವರಿ, 2006 ರಿಂದ 8 ಅಕ್ಟೋಬರ್, 2007 ರ ವರೆಗೆ (1 ವರ್ಷ 253 ದಿನ) ಅಧಿಕಾರದಲ್ಲಿದ್ದರು.

19 ನೇ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ.ಯ ಬಿ.ಎಸ್. ಯಡಿಯೂರಪ್ಪ 2 ಬಾರಿ ಆಡಳಿತ ನಡೆಸಿದ್ದರು. 12 ನವೆಂಬರ್, 2007 ರಿಂದ 19 ನವೆಂಬರ್, 2007 ರವರೆಗೆ (7 ದಿನ), 30 ಮೇ 2008 ರಿಂದ 31 ಜುಲೈ, 2011 ರ ವರೆಗೆ (3 ವರ್ಷ, 62 ದಿನ) ಅವರು ಅಧಿಕಾರದಲ್ಲಿದ್ದರು.

20 ನೇ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ. ಯ ಡಿ.ವಿ. ಸದಾನಂದಗೌಡ 4 ಆಗಸ್ಟ್, 2011 ರಿಂದ 12 ಜುಲೈ, 2012 ರ ವರೆಗೆ(343 ದಿನ) ಆಡಳಿತ ನಡೆಸಿದ್ದರು.

21 ನೇ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ. ಯ ಜಗದೀಶ್ ಶೆಟ್ಟರ್ 12 ಜುಲೈ, 2012 ರಿಂದ 12 ಮೇ, 2013 ರ ವರೆಗೆ (304 ದಿನ) ಅಧಿಕಾರದಲ್ಲಿದ್ದರು.

22 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯ 13 ಮೇ 2013 ರಿಂದ ಅಧಿಕಾರದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...