alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯರ ಮೇಲೆ ಮೆಡಿಸನ್ ಪ್ರಯೋಗದಿಂದ ಮೆದುಳೇ ನಿಷ್ಕ್ರಿಯ

BREAKING-Medical-trial-leaves-one-brain-dead-and-hospitalises-five-others-634959ಸಾಮಾನ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ರೀತಿಯ ಪ್ರಯೋಗಗಳನ್ನು ಕೈಗೊಳ್ಳುವಾಗ ಮೊದಲಿಗೆ ಪ್ರಾಣಿಗಳ ಮೇಲೆ ಪ್ರಯೋಗಿಸುತ್ತಾರೆ. ಆ ಪ್ರಾಣಿಗಳ ಮೇಲೆ ನಡೆದ ಪರೀಕ್ಷೆಗಳಲ್ಲಿ ಯಶಸ್ವಿಯಾದರೆ ಬಳಿಕ ಮನುಷ್ಯರ ಬಳಕೆಗೆ ಅನುಮತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಹೀಗೆ ಔಷಧಿಯೊಂದರ ಪ್ರಯೋಗವನ್ನು ಮನುಷ್ಯರ ಮೇಲೆ ಮಾಡಲು ಹೋಗಿ ಗಂಭೀರ ಸಮಸ್ಯೆ ಎದುರಾದ ಘಟನೆ ವರದಿಯಾಗಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಸಮೀಪದಲ್ಲಿರುವ ಪ್ರಯೋಗಾಲಯವೊಂದರಲ್ಲಿ ಔಷಧ ಪರೀಕ್ಷೆ ಸಂದರ್ಭ ದೊಡ್ಡ ದುರಂತವೇ ನಡೆದುಹೋಗಿದ್ದು, ಪ್ರಯೋಗ ನಡೆಸುವಾಗ ಯಡವಟ್ಟಾಗಿ ಒಬ್ಬ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿದೆ. ಅಲ್ಲದೇ, ಪ್ರಯೋಗಕ್ಕೆ ಒಳಪಟ್ಟಿದ್ದ ಐವರು ಚಿಂತಾಜನಕ ಸ್ಥಿತಿ ತಲುಪಿದ್ದು, ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ಫ್ರಾನ್ಸ್ ಆರೋಗ್ಯ ಖಾತೆ ಸಚಿವರಾದ ಮರಿಸೋಲ್ ತೋರೈನ್ ತಿಳಿಸಿದ್ದಾರೆ.

ರೆನ್ನೆಸ್ ಸಿಟಿಯಲ್ಲಿರುವ ಪ್ರಯೋಗಾಲಯದಲ್ಲಿ  ಔಷಧಗಳನ್ನು ಪರೀಕ್ಷೆ ಮಾಡಲು ಹೋಗಿ ಹೀಗಾಗಿದೆ. ಮನುಷ್ಯರ ಮೇಲೆ ಔಷಧ ಪ್ರಯೋಗಿಸಿದ್ದರಿಂದಲೇ ಗಂಭೀರ ಪರಿಣಾಮ ಉಂಟಾಗಿರುವ ಸಾಧ್ಯತೆಗಳಿದ್ದು, ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವವರನ್ನು  ರಕ್ಷಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...