alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ತದಾನ ಮಾಡುವ ವೇಳೆ ಗೊತ್ತಾಯ್ತ ಜನ್ಮ ರಹಸ್ಯ

baby_switched

ಆಸ್ಟ್ರಿಯಾದಲ್ಲಿ ರಕ್ತದಾನ ಮಾಡಲು ಹೋದ ಮಹಿಳೆಗೆ ಎಂದೂ ನಿರೀಕ್ಷಿಸದ ಒಂದು ಸಂಗತಿ ಗೊತ್ತಾಗಿದೆ. ರಕ್ತ ನೀಡುವ ವೇಳೆ ಆಘಾತಕಾರಿ ವಿಷಯ ಹೊರಬಿದ್ದಿದೆ. 25 ವರ್ಷಗಳ ನಂತರ ಮಹಿಳೆಗೆ ತನ್ನ ತಂದೆ-ತಾಯಿ ಯಾರೆಂಬ ಗೊಂದಲ ಶುರುವಾಗಿದೆ.

ಆಸ್ಟ್ರಿಯಾದ ಎರಡನೇ ದೊಡ್ಡ ನಗರ ಗ್ರಾಜ್. ಅಲ್ಲಿನ ಒಂದು ಆಸ್ಪತ್ರೆಗೆ ರಕ್ತದಾನ ಮಾಡಲು ಮಹಿಳೆ ಹೋಗಿದ್ದಾಳೆ. ಈ ವೇಳೆ ಆಕೆಯ ರಕ್ತ ತಂದೆ, ತಾಯಿ ರಕ್ತಕ್ಕಿಂತ ಭಿನ್ನವಾಗಿದೆ ಎಂಬುದು ಗೊತ್ತಾಗಿದೆ. ಇದರಿಂದ ಮಹಿಳೆ ಆಘಾತಗೊಂಡಿದ್ದಾಳೆ. ನಂತರ ಡಿ ಎನ್ ಎ ಟೆಸ್ಟ್ ಮಾಡಲಾಗಿದೆ. ಆ ವೇಳೆ ಮಹಿಳೆಯ ನಿಜವಾದ ತಂದೆ ತಾಯಿ ಅವರಲ್ಲ ಎಂಬುದು ಗೊತ್ತಾಗಿದೆ. ಇದು ಆಕೆಯ ತಂದೆ, ತಾಯಿಗೂ ಶಾಕ್ ನೀಡಿದೆ.

ಮಗು ಹುಟ್ಟಿದ ವೇಳೆ ಅದಲು-ಬದಲಾಗುವ ಸಾಧ್ಯತೆಗಳಿರುತ್ತವೆ. ಅನೇಕ ಕಡೆ ಇಂತಹ ಪ್ರಕರಣಗಳು ನಡೆದಿವೆ. ಇಲ್ಲಿ ಕೂಡ ಹಾಗೆ ಆಗಿರಬಹುದೆಂದು ಊಹಿಸಲಾಗಿದೆ. ಮಹಿಳೆಯ ನಿಜವಾದ ತಂದೆ-ತಾಯಿಯನ್ನು ಹುಡುಕಿಕೊಡಲು ಆಸ್ಪತ್ರೆ ಮುಂದಾಗಿದೆ.

1990 ರ ಅಕ್ಟೋಬರ್ 15 ರಿಂದ ನವೆಂಬರ್ 20 ರೊಳಗೆ ಜನಿಸಿದ ಎಲ್ಲ ಮಕ್ಕಳ ಪಾಲಕರನ್ನು ಆಸ್ಪತ್ರೆಗೆ ಕರೆಯಿಸಲಾಗುತ್ತಿದೆ. ಅವರ ಡಿ ಎನ್ ಎ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಒಂದು ವೇಳೆ ಇದು ಯಶಸ್ವಿಯಾದ್ರೆ, ಇಬ್ಬರಿಗೆ ನಿಜವಾದ ತಂದೆ-ತಾಯಿ ಸಿಗಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...