alex Certify
ಕನ್ನಡ ದುನಿಯಾ       Mobile App
       

Kannada Duniya

ಇವರ ಬಳಿ ಪಾನ್ ತಗೊಂಡ್ರೆ ಕಾಂಡೋಮ್ ಫ್ರೀ

45740868

ಪಾಟ್ನಾ: ಬಿಹಾರದ ಪಾನ್ ಬೀಡಾ ವ್ಯಾಪಾರಿಯೊಬ್ಬ ಹೆಚ್ಚುತ್ತಿರುವ ಜನ ಸಂಖ್ಯಾ ನಿಯಂತ್ರಣಕ್ಕೆ ತನ್ನದೇ ಆದ ಮಾರ್ಗ ಕಂಡುಕೊಂಡಿದ್ದು ತನ್ನ ಬಳಿ ಪಾನ್ ತೆಗೆದುಕೊಳ್ಳುವ ಗ್ರಾಹಕರಿಗೆ ಉಚಿತ ಕಾಂಡೋಮ್ ವಿತರಿಸುತ್ತಿದ್ದಾರೆ.

ಬಿಹಾರದ ಕತಿಯಾರ್ ಜಿಲ್ಲೆಯ ಪಾಲಿಕೆ ಬಜಾರಿನಲ್ಲಿ ಪಾನ್ ಬೀಡಾ ಶಾಪ್ ಹೊಂದಿರುವ ನಂದ್ ಲಾಲ್ ಸಾ, ಹಲವಾರು ವರ್ಷಗಳಿಂದ ತನ್ನ ಬಳಿ ಬೀಡಾ ಹಾಕಿಸಿಕೊಳ್ಳಲು ಬರುವ ಗ್ರಾಹಕರಿಗೆ ಈ ಕಾಂಡೋಮ್ ಗಳನ್ನು ವಿತರಿಸುತ್ತಿದ್ದು, ಇದಕ್ಕಾಗಿ ಮೆಡಿಕಲ್ ರೆಪ್ರೆಸೆಂಟಿಟಿವ್ಸ್ ಹಾಗೂ ಎನ್ಜಿಓ ಸಂಘಟನೆಗಳು ಅವರಿಗೆ ಉಚಿತ ಕಾಂಡೋಮ್ ನೀಡುತ್ತಿದ್ದಾರೆ.

ಕೆಲವೊಮ್ಮೆ ಮೆಡಿಕಲ್ ರೆಪ್ರೆಸೆಂಟಿಟಿವ್ಸ್ ಹಾಗೂ ಎನ್ಜಿಓ ಸಂಘಟನೆಗಳು ಸಕಾಲಕ್ಕೆ ಕಾಂಡೋಮ್ ಒದಗಿಸದಿದ್ದಲ್ಲಿ ಸ್ವಂತ ಹಣ ಕೊಟ್ಟು ಖರೀದಿಸಿ ತಂದು ತಮ್ಮ ಪಾನ್ ಬೀಡಾ ಗ್ರಾಹಕರಿಗೆ ವಿತರಿಸುವುದಾಗಿ ಹೇಳುವ ನಂದ್ ಲಾಲ್ ಸಾ, ಈ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...