alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ಗಾಂಧಿಗೇ ಟಿಕೆಟ್ ಕೊಟ್ಟ ಸಿ.ಎಂ. ಸಿದ್ಧರಾಮಯ್ಯ

ಬೆಂಗಳೂರು: ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಇಂದು ಬಿಡುವಿಲ್ಲದೇ ಪ್ರಚಾರ ನಡೆಸಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು, ಮೆಟ್ರೋದಲ್ಲಿಯೂ ಪ್ರಯಾಣಿಸುವ ಮೂಲಕ ಜನಸಾಮಾನ್ಯರೊಂದಿಗೆ ಬೆರೆತಿದ್ದಾರೆ.

ವಿಧಾನಸೌಧದಿಂದ ಎಂ.ಜಿ. ರಸ್ತೆಯವರೆಗೆ ಮೆಟ್ರೋದಲ್ಲಿ ಕಾಂಗ್ರೆಸ್ ನಾಯಕರು ಪ್ರಯಾಣ ಬೆಳೆಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಖರೀದಿಸಿದ್ದಾರೆ. ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಡಾ. ಜಿ. ಪರಮೇಶ್ವರ್ ಸೇರಿ ಹಲವು ನಾಯಕರು ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಈ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಜನ ಸೆಲ್ಫಿ ತೆಗೆದುಕೊಂಡಿದ್ದಾರೆ. ಎಂ.ಜಿ. ರಸ್ತೆಯಿಂದ ಬುಕ್ ಸ್ಟಾಲ್ ಗೆ ಭೇಟಿ ನೀಡಿದ ರಾಹುಲ್, ದಿ ಹಿಸ್ಟರಿ ಆಫ್ ಗಾಡ್, ಆರ್ಟ್ ಆಫ್ ಲಿವಿಂಗ್ ಮೊದಲಾದ ಪುಸ್ತಕ ಖರೀದಿಸಿದ್ದಾರೆ. ಅಲ್ಲಿಂದ ಹೊರಬಂದ ಅವರು ಬಾಲಕನೊಬ್ಬನನ್ನು ಎತ್ತಿಕೊಂಡು ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...