alex Certify
ಕನ್ನಡ ದುನಿಯಾ       Mobile App
       

Kannada Duniya

ಮತಯಾಚಿಸುತ್ತಿದ್ದ ಬಿ.ಜೆ.ಪಿ. ಮುಖಂಡನ ಮೇಲೆ ಫೈರಿಂಗ್

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಜೋರಾಗುತ್ತಿದೆ.

ಮತಯಾಚನೆ ಮಾಡುತ್ತಿದ್ದ ಬಿ.ಜೆ.ಪಿ. ಮುಖಂಡನ ಮೇಲೆ ಕಾಂಗ್ರೆಸ್ ಮುಖಂಡ ಫೈರಿಂಗ್ ಮಾಡಿದ್ದು, ಅದೃಷ್ಟವಶಾತ್ ಬಿ.ಜೆ.ಪಿ. ಮುಖಂಡ ಪಾರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಹುಣಸೇನಹಳ್ಳಿಯಲ್ಲಿ ಬಿ.ಜೆ.ಪಿ. ಮುಖಂಡ ರಾಮಣ್ಣ ಎಂಬುವವರು ಮತಯಾಚನೆ ಮಾಡುವಾಗ, ಕಾಂಗ್ರೆಸ್ ಮುಖಂಡ ಜನಾರ್ಧನ್ ಅಲಿಯಾಸ್ ಜಾನಿ ಆಕ್ಷೇಪಿಸಿದ್ದಾರೆ.

ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜನಾರ್ಧನ್ ತನ್ನ ಬಳಿ ಇದ್ದ ರಿವಾಲ್ವರ್ ನಿಂದ ರಾಮಣ್ಣ ಅವರ ಮೇಲೆ ಫೈರಿಂಗ್ ಮಾಡಿದ್ದು, ಗುಂಡುಗಳು ರಾಮಣ್ಣರ ಪಕ್ಕದಲ್ಲಿದ್ದ ಮರಕ್ಕೆ ತಗುಲಿವೆ.

ಫೈರಿಂಗ್ ಮಾಡಿ ಜನಾರ್ಧನ್ ಪರಾರಿಯಾಗಿದ್ದು, ಸ್ಥಳಕ್ಕೆ ತಿರುಮಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...