alex Certify
ಕನ್ನಡ ದುನಿಯಾ       Mobile App
       

Kannada Duniya

‘ಶಿವಮೊಗ್ಗದಲ್ಲಿ ಈಶ್ವರಪ್ಪ ಸೋಲಿಸಲು ಬಿ.ಎಸ್.ವೈ. ಸಂಚು’

ಶಿವಮೊಗ್ಗ: ‘ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕೆ.ಎಸ್. ಈಶ್ವರಪ್ಪ ಅವರನ್ನು ಸೋಲಿಸಲು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಂಚು ರೂಪಿಸಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ರುದ್ರೇಗೌಡರ ಮೂಲಕ ಈಶ್ವರಪ್ಪ ಸೋಲಿಗೆ ಬಿ.ಎಸ್.ವೈ. ಸಂಚು ಮಾಡಿದ್ದಾರೆ.’

ಹೀಗೆಂದು ಹೇಳಿದ್ದು ಇತ್ತೀಚೆಗಷ್ಟೇ ಬಿ.ಜೆ.ಪಿ. ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ, ಸ್ವಾರ್ಥ ರಾಜಕಾರಣದಲ್ಲಿ ಯಡಿಯೂರಪ್ಪ ತೊಡಗಿದ್ದಾರೆ. ಕೆ.ಜೆ.ಪಿ.ಯಿಂದ ಬಂದ ಯಡಿಯೂರಪ್ಪ ಬಿ.ಜೆ.ಪಿ.ಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

ನನಗೆ ಟಿಕೆಟ್ ತಪ್ಪಿಸಿದ್ದ ಯಡಿಯೂರಪ್ಪನವರಿಗೆ ತಮ್ಮ ಪುತ್ರನಿಗೆ ಟಿಕೆಟ್ ಸಿಗದಿದ್ದ ಕಾರಣಕ್ಕೆ ನೋವಾಗುತ್ತದೆ. ಹೊಟ್ಟು ವ್ಯಾಪಾರ ಮಾಡಲು ಶಿಕಾರಿಪುರಕ್ಕೆ ಬಂದ ಯಡಿಯೂರಪ್ಪ ಸಾವಿರಾರು ಕೋಟಿ ರೂ. ಆಸ್ತಿ ಸಂಪಾದಿಸಿದ್ದು ಹೇಗೆ ಎಂಬುದನ್ನು ಜನರಿಗೆ ತಿಳಿಸಬೇಕಿದೆ ಎಂದು ಬೇಳೂರು ಒತ್ತಾಯಿಸಿದ್ದಾರೆ.

ನಾನು ಯಾವುದೇ ಹುದ್ದೆ, ಷರತ್ತು ಹಾಕಿ ಕಾಂಗ್ರೆಸ್ ಸೇರಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...