alex Certify
ಕನ್ನಡ ದುನಿಯಾ       Mobile App
       

Kannada Duniya

ಬಾದಾಮಿ ಮೇಲೂ ಟವೆಲ್ ಹಾಕಿದ ಸಿ.ಎಂ.

ಹೈಕಮಾಂಡ್ ಎದುರು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ ಸಿ.ಎಂ. ಸಿದ್ಧರಾಮಯ್ಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುವ ಚಿಂತನೆಯಲ್ಲಿದ್ದಾರೆ.

ಮೊದಲಿಗೆ ಅವರು ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುವ ಚಿಂತನೆಯಲ್ಲಿದ್ದರಾದರೂ, ಹಿರಿಯ ನಾಯಕರ ಆಕ್ಷೇಪದ ಕಾರಣದಿಂದ ಚಾಮುಂಡೇಶ್ವರಿಯಲ್ಲಿ ಮಾತ್ರ ಸ್ಪರ್ಧಿಸುವುದಾಗಿ ಹೇಳಿದ್ದರು. ನಾನು 2 ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲವೆಂದು ಸಿ.ಎಂ. ಅವರೇ ತಿಳಿಸಿದ್ದರು.

ಬಾದಾಮಿಯಲ್ಲಿ ಶಾಸಕ ಚಿಮ್ಮನಕಟ್ಟಿಯವರ ಮನವೊಲಿಸಿ ಸಿ.ಎಂ. ಸ್ಪರ್ಧಿಸುವ ತಯಾರಿ ನಡೆಸಿದ್ದರು. ಮೊದಲಿಗೆ ಇದಕ್ಕೆ ಒಪ್ಪದ ಚಿಮ್ಮನಕಟ್ಟಿ ಬಳಿಕ ಸಹಮತ ವ್ಯಕ್ತಪಡಿಸಿದ್ದರು. ಆದರೆ, ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯುವ ವೇಳೆಗೆ ಚಿತ್ರಣ ಬದಲಾಗಿ ಸಿ.ಎಂ.ಗೆ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚನೆ ಸಿಕ್ಕಿದೆ. ಬಾದಾಮಿಗೆ ದೇವರಾಜ್ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ.

ಆದರೆ, ಟಿಕೆಟ್ ಘೋಷಣೆಯಾಗಿದ್ದರೂ, ದೇವರಾಜ್ ಪಾಟೀಲ್ ಅವರಿಗೆ ಬಿ.ಫಾರಂ ಕೊಟ್ಟಿಲ್ಲ. ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ಈ ಕುರಿತು ಸೂಚನೆ ಬಂದಿದ್ದು, ಬಾದಾಮಿ ಕ್ಷೇತ್ರದ ಬಿ ಫಾರಂ ತಡೆಹಿಡಿಯುವಂತೆ ತಿಳಿಸಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಸೇಫ್ ಅಲ್ಲ ಎನ್ನುವ ಕಾರಣಕ್ಕೆ ಕಡೇ ಕ್ಷಣದಲ್ಲಿ ಸಿ.ಎಂ. ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...