alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಅಳು ಪತ್ತೆ ಹಚ್ಚಲು ಬಂದಿದೆ ಆ್ಯಪ್..!

3070babyಒಂದೇ ಸಮ ಮಗು ಅಳ್ತಾ ಇರುತ್ತೆ. ತಂದೆ- ತಾಯಿಗೆ ಏನು ಮಾಡಬೇಕು ಅನ್ನೋದು ತಿಳಿಯೋದಿಲ್ಲ. ಮಗುವಿಗೆ ಏನಾಗಿದೆ ಎಂಬುದು ಗೊತ್ತಾಗದೆ ಪಾಲಕರು ಪರದಾಡ್ತಾರೆ. ಆದ್ರೆ ಈ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿದೆ ಸಂಶೋಧನಾ ತಂಡ.

ಸಂಶೋಧಕರ ತಂಡ ಒಂದು ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಮಗು ಯಾಕೆ ಅಳ್ತಾ ಇದೆ ಅನ್ನೋದನ್ನು ಇದು ಡಿಕೋಡ್ ಮಾಡುತ್ತೆ. The Infant Cries Translator (ಮಕ್ಕಳ ಅಳುವನ್ನು ಭಾಷಾಂತರಿಸುವುದು) ಎಂದು ಆ್ಯಪ್ ಗೆ ಹೆಸರಿಡಲಾಗಿದೆ. ಇದು ಮಕ್ಕಳ ಎಲ್ಲ ರೀತಿಯ ಅಳುವನ್ನು ಪತ್ತೆ ಹಚ್ಚಬಲ್ಲದಂತೆ.

ಮಗು ಅಳುವಾಗ ಹತ್ತು ಸೆಕೆಂಡುಗಳ ಕಾಲ ರೆಕಾರ್ಡ್ ಬಟನ್ ಒತ್ತಿ ಹಿಡಿದಿಡಬೇಕಾಗುತ್ತದೆ. ನಂತರ 15 ಸೆಕೆಂಡುಗಳಲ್ಲಿ ಮಗು ಅಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಮೊಬೈಲ್ ಗೆ ಸಂದೇಶ ಕಳುಹಿಸುತ್ತದೆ. ಇದಕ್ಕಾಗಿ ಸಂಶೋಧಕರು 100 ನವಜಾತ ಶಿಶುಗಳ 2 ಲಕ್ಷ ಅಳುವನ್ನು ರೆಕಾರ್ಡ್ ಮಾಡಿದ್ದಾರೆ.

ಮಕ್ಕಳ ನಾಲ್ಕು ಬಗೆಯ ಅಳುವನ್ನು ಇದು ಗುರುತಿಸುತ್ತದೆ. ಮಗುವಿಗೆ ಹಸಿವೆಯಾಗಿದೆಯಾ? ನಿದ್ರೆ ಬಂದಿದೆಯಾ? ನೋವಾಗ್ತಾ ಇದೆಯಾ? ಡೈಪರ್ ಒದ್ದೆಯಾಗಿದೆಯಾ ಎನ್ನುವುದನ್ನು ಅದು ಗುರುತಿಸುತ್ತದೆ. 2 ವಾರದ ಶಿಶುವಿನ ಅಳುವನ್ನು ಆ್ಯಪ್ಸ್ ಶೇಕಡಾ 92 ರಷ್ಟು ಪತ್ತೆ ಹಚ್ಚುತ್ತದೆಯಂತೆ. ಆರು ತಿಂಗಳ ಮಗುವಿನವರೆಗೆ ಇದನ್ನು ಬಳಸಬಹುದಂತೆ.

ಆ್ಯಪಲ್ ಪ್ಲೇ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...