alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನವನ್ನೂ ಮೀರಿಸುವಂತಿದೆ ಈ ಹೈಟೆಕ್ ರೈಲು

ರೈಲುಭಾರತದಲ್ಲಿ ಬುಲೆಟ್ ಟ್ರೈನ್ ಯಾವಾಗ ಬರುತ್ತೋ ಗೊತ್ತಿಲ್ಲ. ಆದರೆ, ಇರುವ ರೈಲಿನ ವ್ಯವಸ್ಥೆಯಾದರೂ ಸುಧಾರಿಸಲಿ. ಕ್ಲೀನಿಂಗ್ ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರಯಾಣಿಕರು ಮುಂದಿಡುತ್ತಿದ್ದ ಕಾರಣ ರೈಲಿನ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ.

35 ಕೋಟಿ ರೂ. ವೆಚ್ಛದಲ್ಲಿ ಮಾಡೆಲ್ ರೈಲೊಂದನ್ನು ತಯಾರಿಸಿದ್ದು, ವಿಮಾನದ ರೀತಿಯಲ್ಲೇ ಹೈಫೈ ಸೌಲಭ್ಯಗಳನ್ನು ಒದಗಿಸಲಾಗಿದೆ. ಭೂಪಾಲ್ ನ ಹಬೀಬ್ ಗಂಜ್ ರೈಲ್ವೇ ಸ್ಟೇಷನ್ ನಲ್ಲಿ ಈ ಮಾಡೆಲ್ ರೈಲನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬಳಕೆಗೆ ನೀಡಲಾಗುವುದು. ಎಲ್ ಇಡಿ ಸ್ಕ್ರೀನ್ ಟಿವಿ, ಕೆಂಪು ಬಣ್ಣದ ನೆಲಹಾಸು ಹೊಂದಿಸಲಾಗಿದೆ. ಅಲ್ಲದೇ, ಗ್ರೀನ್ ಟಾಯ್ಲೆಟ್, ಊಟ ಮಾಡಲು ಅನುಕೂಲವಾಗುವಂತಹ ಟೇಬಲ್ ವ್ಯವಸ್ಥೆ ಕೂಡ ಇದೆ.

ಭಾರತದಲ್ಲಿ ರೈಲಿನ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಈ ಮಾದರಿ ರೈಲನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದ್ದು, ಸೇಮ್ ವಿಮಾನದಲ್ಲಿರುವ ರೀತಿಯಲ್ಲಿಯೇ ಹೈಫೈ ಸೌಲಭ್ಯಗಳನ್ನು ಹೊಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಇದನ್ನು ಪ್ರಯಾಣಿಕರ ಬಳಕೆಗೆ ನೀಡಲಾಗುವುದು ಎಂದು ಹೇಳಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...