alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕ್ಕೆ ನೀವು ಕೆಲಸ ಮಾಡೋದು 3 ಗಂಟೆ ಮಾತ್ರ

ಕೆಲಸದ ಒತ್ತಡವೇ ನಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಗೂ ಮೂಲ. ಅತಿಯಾದ ಕೆಲಸದಿಂದ್ಲೇ ಬೇಡದ ಖಾಯಿಲೆಗಳೆಲ್ಲ ಆವರಿಸಿಕೊಳ್ಳುತ್ತವೆ. ದಿನದಲ್ಲಿ ಪಕ್ಕಾ 8 ಗಂಟೆಗಳ ಕಾಲ ಕೆಲಸ ಮಾಡುವುದು ಕೂಡ ದೀರ್ಘಾವಧಿ ಎನ್ನುತ್ತಿದೆ ಇತ್ತೀಚಿನ ಸಂಶೋಧನೆ.

ಬ್ರಿಟನ್ ನಲ್ಲಿ ಫುಲ್ ಟೈಂ ಕೆಲಸ ಮಾಡುವ 1989 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ದಿನಕ್ಕೆ ಸತತ 8 ಗಂಟೆ ಕೆಲಸ ಮಾಡಿದ್ರೂ ಪ್ರೊಡಕ್ಟಿವ್ ಆಗಿ ವರ್ಕ್ ಮಾಡುವ ಅವಧಿ ಕೇವಲ 2 ಗಂಟೆ 53 ನಿಮಿಷ ಮಾತ್ರ. ಉಳಿದ 5 ಗಂಟೆಗಳ ಸಮಯವನ್ನು ವ್ಯರ್ಥ ಮಾಡಿದಂತೆಯೇ ಲೆಕ್ಕ.

ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಚ್ ಮಾಡುತ್ತ, ಸಹೋದ್ಯೋಗಿಗಳ ಜೊತೆ ಗಾಸಿಪ್ ಮಾಡುತ್ತ ಕಾಲ ಕಳೆಯುತ್ತಾರೆ. ಕೆಲಸದ ಸಮಯದಲ್ಲಿ ಕೆಲಸ ಬಿಟ್ಟು ಜನ ಏನೆಲ್ಲಾ ಮಾಡ್ತಾರೆ ಅನ್ನೋದನ್ನು ನೋಡೋಣ.

ಸೋಶಿಯಲ್ ಮೀಡಿಯಾ ಚೆಕಿಂಗ್ – 44 ನಿಮಿಷ

ನ್ಯೂಸ್ ವೆಬ್ ಸೈಟ್ ರೀಡಿಂಗ್ – 1 ಗಂಟೆ 5 ನಿಮಿಷ

ಕೆಲಸ ಬಿಟ್ಟು ಸಹೋದ್ಯೋಗಿಗಳ ಜೊತೆ ಚರ್ಚೆ – 40 ನಿಮಿಷ

ಹಾಟ್ ಡ್ರಿಂಕ್ಸ್ ತಯಾರಿ – 17 ನಿಮಿಷ

ಸ್ಮೋಕಿಂಗ್ ಬ್ರೇಕ್ – 23 ನಿಮಿಷ

ಮೆಸೇಜಿಂಗ್ – 14 ನಿಮಿಷ

ಸ್ನಾಕ್ಸ್ ಸೇವನೆ – 8 ನಿಮಿಷ

ಆಫೀಸ್ ನಲ್ಲೇ ಆಹಾರ ತಯಾರಿ – 7 ನಿಮಿಷ

ಫೋನ್ ಕರೆ – 18 ನಿಮಿಷ

ಹೊಸ ಕೆಲಸದ ಹುಡುಕಾಟ – 26 ನಿಮಿಷ

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...