alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಬಗ್ಗೆ ಆಶ್ಚರ್ಯಕಾರಿ ವಿಷ್ಯ ಹೊರ ಹಾಕಿದ ವೈದ್ಯರು

ಏಮ್ಸ್ ಅಧ್ಯಯನವೊಂದು ಆಶ್ಚರ್ಯಕಾರಿ ಸಂಗತಿಯನ್ನು ಹೊರ ಹಾಕಿದೆ. ಯೋಗದಿಂದ ಸೆಕ್ಸ್ ಜೀವನ ಉತ್ತಮಗೊಳ್ಳಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ. ಯೋಗದಿಂದ ಉತ್ತಮ ಗುಣಮಟ್ಟದ ವೀರ್ಯಾಣುಗಳ ಉತ್ಪತ್ತಿಯಾಗುತ್ತದೆಯಂತೆ.

ಏಮ್ಸ್ ನ ಮೂತ್ರಶಾಸ್ತ್ರ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ತಜ್ಞರು ಈ ವರ್ಷಾರಂಭದಲ್ಲಿ ಇದ್ರ ಬಗ್ಗೆ ಸಂಶೋಧನೆ ಕೈಗೊಂಡಿದ್ದರು. ಅಂತರಾಷ್ಟ್ರೀಯ ಮೆಡಿಕಲ್ ಜರ್ನಲ್ ನೇಚರ್ ರಿವ್ಯೂ ಜರ್ನಲ್ ನಲ್ಲಿ ಇದನ್ನು ಪ್ರಕಟಿಸಲಾಗಿದೆ. ಆರೋಗ್ಯಕರ ಮಗುವಿನ ಜನನಕ್ಕೆ ಗುಣಮಟ್ಟದ ವೀರ್ಯಾಣು ಬಹಳ ಮುಖ್ಯ. ಆಕ್ಸಿಡೇಟಿವ್ ಒತ್ತಡದಿಂದ ಡಿಎನ್ಎ ಹಾನಿಗೊಳಗಾಗುತ್ತದೆ.

ಮಾಲಿನ್ಯ, ಬ್ಯಾಕ್ಟೀರಿಯಾ, ಸೋಂಕು, ಧೂಮಪಾನ, ಮದ್ಯಪಾನ, ಸ್ಥೂಲಕಾಯ, ಫಾಸ್ಟ್ ಫುಡ್ ನಿಂದಾಗಿ ಆಕ್ಸಿಡೇಟಿವ್ ಒತ್ತಡ ಉಂಟಾಗುತ್ತದೆ. ಜೀವನ ಶೈಲಿಯಲ್ಲಿ ಕೆಲ ಬದಲಾವಣೆ ಮಾಡುವುದ್ರಿಂದ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಇದ್ರಿಂದ ಡಿಎನ್ಎ ಗುಣಮಟ್ಟ ಸುಧಾರಿಸುತ್ತದೆ.

ಪ್ರತಿ ನಿತ್ಯ ಯೋಗ ಮಾಡುವುದ್ರಿಂದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಬಹುದು. ಡಿಎನ್ಎ ಗುಣಮಟ್ಟದಲ್ಲಿ ಸುಧಾರಣೆ ತರಬಹುದು. ಏಮ್ಸ್ ಅಧ್ಯಯನದಲ್ಲಿ 200 ಪುರುಷರು ಪಾಲ್ಗೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...