alex Certify
ಕನ್ನಡ ದುನಿಯಾ       Mobile App
       

Kannada Duniya

ಎಕ್ಸ್ ರೇ ಕೆಲಸ ಮಾಡುತ್ತೆ ಈಕೆ ಕಣ್ಣು….

ಮನುಷ್ಯನ ದೇಹದೊಳಗಿನ ಸಮಸ್ಯೆಗಳನ್ನು ತಿಳಿದುಕೊಳ್ಳಲು ವೈದ್ಯಲೋಕ ಎಕ್ಸ್ –ರೇ ಯಂತ್ರದ ಸಹಾಯ ಪಡೆಯುತ್ತದೆ. ಇದ್ರ ಮೂಲಕ ದೇಹದ ಯಾವ ಭಾಗದಲ್ಲಿ ಯಾವ ಸಮಸ್ಯೆಯಿದೆ ಎಂಬುದು ಗೊತ್ತಾಗುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷ್ಯ. ಆದ್ರೆ ಯಾವುದೇ ಯಂತ್ರದ ಸಹಾಯವಿಲ್ಲದೆ ಬರಿಗಣ್ಣಿನಲ್ಲಿ ದೇಹದೊಳಗಿನ ಸಮಸ್ಯೆ ಕಂಡು ಹಿಡಿಯುವ ಹುಡುಗಿಯೊಬ್ಬಳಿದ್ದಾಳೆ.

ಆಶ್ಚರ್ಯವಾದ್ರೂ ಇದು ಸತ್ಯ. ರಷ್ಯಾದ ನತಾಶಾ ಡಮ್ಕಿನಾಳನ್ನು ಓಡಾಡುವ, ಮಾತನಾಡೋ ಎಕ್ಸ್-ರೇ ಮಶಿನ್ ಎಂದು ಕರೆಯುತ್ತಾರೆ. ನತಾಶಾ ಶಕ್ತಿ ನೋಡಿ ದೊಡ್ಡ ದೊಡ್ಡ ವಿಜ್ಞಾನಿಗಳೇ ಆಶ್ಚರ್ಯಕ್ಕೊಳಗಾಗಿದ್ದಾರೆ. ಈಕೆ ಕಣ್ಣು ಎಕ್ಸ್ ರೇ ಮಶಿನ್ ರೀತಿಯಲ್ಲಿ ಕೆಲಸ ಮಾಡುತ್ತದೆ.

ಮನುಷ್ಯನ ದೇಹವನ್ನು ಬರಿಗಣ್ಣಿನಲ್ಲಿ ನೋಡಿ ಆತನಿಗೆ ಯಾವ ಖಾಯಿಲೆಯಿದೆ ಎಂಬುದನ್ನು ನತಾಶಾ ಹೇಳ್ತಾಳೆ. ನತಾಶಾಳ ಈ ಅದ್ಬುತ ಶಕ್ತಿಯ ರಹಸ್ಯ ಕಂಡುಹಿಡಿಯಲು ವೈದ್ಯರಿಗೆ ಈವರೆಗೂ ಸಾಧ್ಯವಾಗಿಲ್ಲ. ದೇಹವನ್ನು ನೋಡಿದ ನಂತ್ರ ಕೆಲ ಸಮಯ ತೆಗೆದುಕೊಂಡು ಏನು ರೋಗ ಎಂಬುದನ್ನು ನತಾಶಾ ಹೇಳ್ತಾಳೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...