alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪಾಗಿ ಉಚ್ಛಾರವಾಗುತ್ತದೆ ಈ ಕಾಮನ್ ವರ್ಡ್ಸ್

wrong prounanceಮಾತಿನ ಮಧ್ಯೆ ಇಂಗ್ಲೀಷ್ ಶಬ್ಧಗಳನ್ನು ಬಳಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಹೀಗೆ ಮಾತನಾಡುವಾಗ ಕೆಲವು ಶಬ್ಧಗಳು ತಪ್ಪಾಗಿ ಉಚ್ಛಾರವಾಗುತ್ತವೆ. ಅಂತಹ ಕೆಲವು ತಪ್ಪಾಗಿ ಉಚ್ಛರಿಸಲ್ಪಡುವ ಸಾಮಾನ್ಯ ಶಬ್ಧಗಳು ಇಲ್ಲಿವೆ.

ಡೆಂಗ್ಯೂ – ಡೆಂಘೆ: ಎಲ್ಲ ಕಡೆ ಡೆಂಗ್ಯೂ ಜ್ವರ ಆವರಿಸಿದೆ ನಾವು ಹುಷಾರಾಗಿರಬೇಕು ಅಂತ ಹೇಳುವುದನ್ನು ಕೇಳುತ್ತೇವೆ. ಡೆಂಗ್ಯೂ ಎನ್ನುವ ಉಚ್ಛಾರ ತಪ್ಪು ಅದನ್ನು ಡೆಂಘೆ ಜ್ವರ ಎಂದು ಉಚ್ಛರಿಸಬೇಕು.

ಅಸ್ತಮಾ- ಅಝಮಾ: ಉಸಿರಾಟದ ತೊಂದರೆಯಿಂದ ಉಂಟಾಗುವ ರೋಗವನ್ನು ಸಾಮಾನ್ಯವಾಗಿ ಅಸ್ತಮಾ ಎಂದೇ ಹೇಳುತ್ತಾರೆ. ಅದನ್ನು ಅಸ್ತಮಾ ಅಲ್ಲ ಅಝಮಾ ಎಂದು ಉಚ್ಛರಿಸಬೇಕು.

ಬ್ರೇಕ್ ಫಾಸ್ಟ್ – ಬ್ರೇಕ್ ಫಸ್ಟ್: ಬೆಳಗಾದ ತಕ್ಷಣ ಬ್ರೇಕ್ ಫಾಸ್ಟ್ ಆಯ್ತಾ ಅಂತ ಕೇಳುತ್ತಾರೆ. ಅದು ಬ್ರೇಕ್ ಫಾಸ್ಟ್ ಅಲ್ಲ ಬ್ರೇಕ್ ಫಸ್ಟ್.

ಬಿಯರ್ – ಬೆಯರ್: ಇಂಗ್ಲೀಷಿನಲ್ಲಿ ಕರಡಿಯನ್ನು ಬಿಯರ್ ಎಂದೇ ಹೇಳಲಾಗುತ್ತೆ ಆದರೆ ಇದು ಬಿಯರ್ ಅಲ್ಲ ಬೆಯರ್.

ಚ್ಯಾಸಿಸ್ (chassis)- ಶೌಸಿ: ವಾಹನಗಳ ಕೆಳಗಡೆ ಇರುವ ಅಡಿಪಾಯಕ್ಕೆ ಶೌಸಿ ಎಂದು ಹೇಳುತ್ತಾರೆ. ಆದರೆ ಸಾಮಾನ್ಯವಾಗಿ ಎಲ್ಲರೂ ಅದನ್ನು ಚ್ಯಾಸಿಸ್ ಎಂದೇ ಹೇಳುತ್ತಾರೆ.

ಕಾಂಬ್ – ಕೋಮ್: ಕೆಲವರು ಬಾಚಣಿಕೆಯನ್ನು ಕಾಂಬ್, ಕೋಂಬ್ ಎಂದು ಉಚ್ಛರಿಸುತ್ತಾರೆ ಇದು ತಪ್ಪು. ಇದನ್ನು ಕೋಮ್ ಎಂದು ಉಚ್ಛರಿಸಬೇಕು.

ಓವನ್ – ಅವನ್: ಅವನ್ ಅನ್ನು ಓವನ್ ಎಂದು ಉಚ್ಛರಿಸುವವರೇ ಹೆಚ್ಚು. ಓವನ್ ಎಂಬ ಉಚ್ಛಾರಣೆ ತಪ್ಪು.

ಸ್ಯಾಂಪಲ್ – ಸಾಂಪಲ್: ತರ ತರದ ನಮೂನೆಗಳನ್ನು ನೋಡುವಾಗ ಸ್ಯಾಂಪಲ್ ಎಂದೇ ಉಚ್ಛರಿಸುವವರು ಹೆಚ್ಚು. ಅದು ಸ್ಯಾಂಪಲ್ ಅಲ್ಲ ಸಾಂಪಲ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...