alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಕ್ಕೆ ಹಾರುವ ಮುನ್ನ ನಿಮಗಿದು ತಿಳಿದಿರಲಿ….

kiss

ಸಾಮಾನ್ಯವಾಗಿ ರಜೆ ಕಳೆಯಲು ಜೋಡಿಹಕ್ಕಿಗಳು ವಿದೇಶಕ್ಕೆ ಹಾರ್ತಾರೆ. ಅಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡು ಎಂಜಾಯ್ ಮಾಡಬಹುದು, ತಮ್ಮ ದೇಶದಲ್ಲಿ ನಿರ್ಬಂಧಗಳು ಜಾಸ್ತಿ ಅನ್ನೋದು ಎಲ್ಲರ ಭಾವನೆ.

ಆದ್ರೆ ಪರದೇಶದಲ್ಲಿನ ಕಾನೂನಿನ ಬಗ್ಗೆ ತಿಳಿದುಕೊಳ್ಳದೇ ಇದ್ರೆ ನೀವು ಜೈಲುಪಾಲಾಗೋದು ಗ್ಯಾರಂಟಿ. ಅದ್ರಲ್ಲೂ ಸೆಕ್ಸ್ ಗೆ ಸಂಬಂಧಪಟ್ಟಂತೆ ಕೆಲ ದೇಶಗಳಲ್ಲಿ ವಿಚಿತ್ರ ಕಾನೂನುಗಳಿವೆ.

ಸಾರ್ವಜನಿಕ ಸಾರಿಗೆಯಲ್ಲಿ ಚುಂಬನ : ವಿಯೆನ್ನಾ ಮತ್ತು ಆಸ್ಟ್ರಿಯಾದಲ್ಲಿ ನೀವು ಸಾರ್ವಜನಿಕ ಸಾರಿಗೆಯಲ್ಲಿ ಯಾವುದೇ ಕಾರಣಕ್ಕೂ ಪರಸ್ಪರ ಚುಂಬಿಸಿಕೊಳ್ಳುವಂತಿಲ್ಲ. ಹಾಗೇನಾದ್ರೂ ಮಾಡಿದ್ರೆ 75.95 ಡಾಲರ್ ದಂಡ ಹಾಕಲಾಗುತ್ತದೆ.

ನೇಪಾಳದಲ್ಲಿ ಪೋರ್ನ್ ಗೆ ನಿಷೇಧ : ನೇಪಾಳದಲ್ಲಿ ಅಶ್ಲೀಲ ಚಿತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಾಲಿವುಡ್ ಸಿನೆಮಾಗಳಲ್ಲಿ ಬೋಲ್ಡ್ ದೃಶ್ಯಗಳೇನಾದ್ರೂ ಇದ್ರೆ ಅವನ್ನು ಕತ್ತರಿಸಿ ನಂತರ ಬಿಡುಗಡೆ ಮಾಡಲಾಗುತ್ತದೆ. ಎಲ್ಲಾ ವೆಬ್ ಸೈಟ್ ಗಳಿಗೂ ಸರ್ಕಾರವೇ ಸೆನ್ಸಾರ್ ವಿಧಿಸಿದೆ.

ಮೋಟಾರ್ ಬೈಕ್ ಮೇಲೆ ನೋ ಸೆಕ್ಸ್ : ಇಂಗ್ಲೆಂಡ್ ನಲ್ಲಿ ಪಾರ್ಕ್ ಮಾಡಿರೋ ಮೋಟಾರ್ ಬೈಕ್ ಮೇಲೆ ಯಾರೂ ಸಂಭೋಗ ನಡೆಸುವಂತಿಲ್ಲ. ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲೇ ಈ ಕಟ್ಟುನಿಟ್ಟಿನ ನಿಯಮ ಜಾರಿಗೆ ಬಂದಿತ್ತು.

ವ್ಯಭಿಚಾರಕ್ಕೆ ಇಲ್ಲಿ ಮಹಿಳೆಯರೇ ಹೊಣೆ : ಈಜಿಪ್ಟ್ ನಲ್ಲಿ ವ್ಯಭಿಚಾರಕ್ಕೆ ಸಂಬಂಧಪಟ್ಟ ಪ್ರಕರಣಗಳಲ್ಲೆಲ್ಲ ಮಹಿಳೆಯರಿಗೆ 2 ವರ್ಷ ಶಿಕ್ಷೆಯಾಗುತ್ತದೆ. ಪತಿ ಅಕ್ರಮ ಸಂಬಂಧ ಹೊಂದಿದ್ದರೆ ಆತ ದೊಡ್ಡ ಅಪರಾಧಿಯೇ ಅಲ್ಲ ಎನ್ನುತ್ತದೆ ಕಾನೂನು. ಅಂತಹ ಪುರುಷರಿಗೆ ಕೇವಲ 6 ತಿಂಗಳು ಸೆರೆವಾಸ ವಿಧಿಸಲಾಗುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಚುಂಬನಕ್ಕಿಲ್ಲ ಅವಕಾಶ : ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಚುಂಬನಕ್ಕೆ ನಿಷೇಧ ಹೇರಲಾಗಿದೆ. ಅಶ್ಲೀಲ ಹಾಡು ಹೇಳುವುದು, ಮಾತನಾಡುವುದು ಮಾಡಿದ್ರೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. 2007ರಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಶಿಲ್ಪಾ ಶೆಟ್ಟಿಗೆ ಚುಂಬಿಸಿದ್ದ ರಿಚರ್ಡ್ ಗೇರ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು.

ಸಾರ್ವಜನಿಕ ಸ್ಥಳದಲ್ಲಿ ಅಪ್ಪಿಕೊಳ್ಳುವುದು ನಿಷಿದ್ಧ : ಮುಸ್ಲಿಂ ರಾಷ್ಟ್ರ ಕತಾರ್ ನಲ್ಲಿ ಪ್ರವಾಸಿಗರ ಬಗ್ಗೆ ಹದ್ದಿನ ಕಣ್ಣಿಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅಥವಾ ಪುರುಷ ಮತ್ತು ಮಹಿಳೆ ಕೈ ಕೈ ಹಿಡಿದು ನಡೆದಾಡುವಂತಿಲ್ಲ, ತಬ್ಬಿಕೊಳ್ಳಲು ಮತ್ತು ಚುಂಬಿಸಲು ಕೂಡ ಅವಕಾಶವಿಲ್ಲ.

ಹೋಟೆಲ್ ಕೋಣೆಯಲ್ಲಿ ನಗ್ನರಾದ್ರೆ ಶಿಕ್ಷೆ ಗ್ಯಾರಂಟಿ : ಸಿಂಗಾಪುರದಲ್ಲಿ ಹೋಟೆಲ್ ಕೋಣೆಗಳಲ್ಲಿ ವಿವಸ್ತ್ರರಾಗಿ ಓಡಾಡಿದ್ದು ಗಮನಕ್ಕೆ ಬಂದ್ರೆ ಬಂಧಿಸಲಾಗುತ್ತದೆ. 1996ರಲ್ಲೇ ಈ ಕಾನೂನು ಜಾರಿಗೆ ಬಂದಿದೆ. ಖಾಸಗಿ ಸ್ಥಳದಲ್ಲಿ, ಸಾರ್ವಜನಿಕರಿಗೆ ಗೋಚರಿಸುವಂತಹ ಸಾಧ್ಯತೆ ಇದ್ದಾಗ ವ್ಯಕ್ತಿ ಯಾವುದೇ ಕಾರಣಕ್ಕೂ ವಿವಸ್ತ್ರನಾಗಿ ಇರುವಂತಿಲ್ಲ. ಹಾಗೇನಾದ್ರೂ ಮಾಡಿದ್ರೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಅನೈತಿಕ ಸಂಬಂಧಕ್ಕಿಲ್ಲ ಅವಕಾಶ : ದುಬೈನಲ್ಲಿ ಅನೈತಿಕ ಸಂಬಂಧ ಹೊಂದುವುದು ಶಿಕ್ಷಾರ್ಹ ಅಪರಾಧ. ಸಲಿಂಗ ಕಾಮ ಮತ್ತು ಸಲಿಂಗಿಗಳ ವಿವಾಹವನ್ನು ಕೂಡ ನಿಷೇಧಿಸಲಾಗಿದೆ. ಅವಿವಾಹಿತರು ಅಥವಾ ಹತ್ತಿರ ಸಂಬಂಧಿಗಳಾಗಿರುವ ಪುರುಷ ಮತ್ತು ಮಹಿಳೆ ಒಂದೇ ಹೋಟೆಲ್ ಕೋಣೆಯಲ್ಲಿ ವಾಸಿಸುವಂತಿಲ್ಲ, ಲಿವಿಂಗ್ ಟುಗೆದರ್ ಗೂ ಇಲ್ಲಿ ಅವಕಾಶವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...