alex Certify
ಕನ್ನಡ ದುನಿಯಾ       Mobile App
       

Kannada Duniya

ಇದೇ ನೋಡಿ ವಿಶ್ವದ ಅತ್ಯಂತ ಅಪಾಯಕಾರಿ ಮರ

most dangerous treeಈ ಮರವನ್ನು ವಿಶ್ವದ ಅತ್ಯಂತ ಅಪಾಯಕಾರಿ ಮರವೆಂದು ಪರಿಗಣಿಸಲಾಗಿದೆ. ಕೆರೆಬಿಯನ್, ಫ್ಲೋರಿಡಾ, ಬಹಾಮಾಸ್, ಮೆಕ್ಸಿಕೋ, ಮಧ್ಯ ಅಮೆರಿಕಾ ಹಾಗೂ ದಕ್ಷಿಣ ಅಮೆರಿಕಾದ ಸಮುದ್ರ ತೀರಗಳಲ್ಲಿ ಕಂಡು ಬರುವ ಈ ಮರದ ಕುರಿತು ಎಚ್ಚರಿಕೆ ಫಲಕಗಳನ್ನೂ ಹಾಕಲಾಗಿದೆ.

‘ಮಂಚಿನೀಲ್’ ಎಂದು ಹೆಸರಿಸಲ್ಪಟ್ಟಿರುವ ಈ ಮರದ ಹಣ್ಣುಗಳನ್ನು ‘ಲಿಟ್ಲ್ ಆಪಲ್ ಆಫ್ ಡೆತ್’ ಎಂದೇ ಕರೆಯಲಾಗುತ್ತದೆ. ಈ ಹಣ್ಣುಗಳನ್ನು ತಿಂದವರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದು ಹೇಳಲಾಗಿದೆ. ಮರದ ಅಂಟು ಮೈಗೆ ತಾಗಿದರೆ ತುರಿಕೆ, ಅಲರ್ಜಿ ಉಂಟಾಗಿ ಪ್ರಾಣಾಪಾಯವೂ ಸಂಭವಿಸುತ್ತದೆ ಎನ್ನಲಾಗಿದೆ.

ನೋಡಲು ಇತರೆ ಮರಗಳಂತೆ ಕಾಣುವ ‘ಮಂಚಿನೀಲ್’ ವಿಷಯುಕ್ತವಾಗಿದ್ದು, ಕೆರಿಬ್ ಇಂಡಿಯನ್ಸ್ ತಮ್ಮ ಬಾಣಗಳ ಮುಂಭಾಗಕ್ಕೆ ಇದರ ವಿಷವನ್ನೇ ಸವರುವ ಮೂಲಕ ಶತ್ರುಗಳ ಮೇಲೆ ಪ್ರಯೋಗಿಸುತ್ತಾರಂತೆ. ಈ ಮರದ ಕೊಂಬೆಗಳನ್ನು ಸುಟ್ಟರೆ ಆಗ ಹೊರ ಹೊಮ್ಮುವ ಹೊಗೆಯೂ ಕೂಡಾ ವಿಷಕಾರಕವೆನ್ನಲಾಗಿದ್ದು, ಕಣ್ಣಿಗೆ ಹಾನಿಯುಂಟು ಮಾಡುತ್ತದಲ್ಲದೇ ಹೊಗೆ ಸೇವಿಸಿದವರು ಕಾಯಿಲೆಗೆ ತುತ್ತಾಗುವುದು ಗ್ಯಾರಂಟಿ ಎನ್ನಲಾಗಿದೆ. ಹೀಗಾಗಿ ಈ ಮರವನ್ನು ಮುಟ್ಟದಂತೆ ಹಾಗೂ ಅದರಿಂದಾಗುವ ಪರಿಣಾಮದ ಕುರಿತು ಎಚ್ಚರಿಕೆ ಫಲಕವನ್ನೂ ಹಾಕಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...