alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲಿಯೇ ಕುಳಿತು ಕೆಲಸ ಮಾಡುವವರಿಗೆ ಇಲ್ಲಿದೆ ಸುವರ್ಣಾವಕಾಶ

download

ಇದು ಆನ್ಲೈನ್ ಯುಗ. ಇಂಟರ್ ನೆಟ್ ಇದ್ದಲ್ಲಿ ಏನು ಬೇಕಾದ್ರೂ ಮಾಡಬಹುದು ಎನ್ನುವ ಕಾಲ ಇದು. ಸದಾ ಕಚೇರಿಗೂ ಮನೆಗೂ ಓಡಿ ಓಡಿ ಸುಸ್ತಾಗಿದೆ. ಕೆಲಸದ ಒತ್ತಡ ಬೇರೆ. ಮಹಾನಗರಗಳಲ್ಲಿ ಟ್ರಾಫಿಕ್ ಕಿರಿಕಿರಿ. ಇದರಿಂದ ಯಾವಾಗ ಮುಕ್ತಿ ಸಿಗುತ್ತೋ ಎನ್ನುವವರಿಗೆ ಈ ಆನ್ಲೈನ್ ವೆಬ್ ಸೈಟ್ ಗಳು ಸಹಕಾರಿ. ಮನೆಯಲ್ಲಿಯೇ ಕುಳಿತು, ಯಾವುದೇ ಒತ್ತಡವಿಲ್ಲದೆ ತಿಂಗಳಿಗೆ 30-40 ಸಾವಿರ ದುಡಿಯಬಹುದು.

ಯಸ್, ಮನೆಯಲ್ಲಿಯೇ ಕುಳಿತು ಕೈತುಂಬಾ ಹಣ ಗಳಿಸಬಹುದಾದ ಅನೇಕ ಆನ್ಲೈನ್ ಕೆಲಸಗಳಿವೆ. ಅದ್ರಲ್ಲಿ ಕೆಲವೊಂದನ್ನು ನಾವು ಹೇಳ್ತೇವೆ ಕೇಳಿ.

Odesk ವೆಬ್ ಸೈಟ್ : ನಿಮಗೆ ವೆಬ್ ಡಿಸೈನಿಂಗ್, ವರ್ಡ್ಪ್ರೆಸ್ ನಲ್ಲಿ ಆಸಕ್ತಿ ಇದ್ದರೆ ಮನೆಯಲ್ಲಿಯೇ ಕುಳಿತು ಗಂಟೆಗೆ 300 ರೂಪಾಯಿ ಗಳಿಸಬಹುದು. ಇದಕ್ಕಾಗಿ ನೀವು https://www.odesk.com ಗೆ ಲಾಗಿನ್ ಆಗಬೇಕು. ಇಲ್ಲಿ ವೆಬ್ ಡಿಸೈನ್ ಹಾಗೂ ಸ್ವತಂತ್ರವಾಗಿ ಕೆಲಸ ಮಾಡುವವರಿಗೆ ಅವಕಾಶವಿದೆ. ಈ ವೆಬ್ ಮೂಲಕ ನೀವು ತಿಂಗಳಿಗೆ 30-40 ಸಾವಿರ ದುಡಿಯಬಹುದಾಗಿದೆ.

Scripted ವೆಬ್ಸೈಟ್ : ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ನೀವು scripted.com ಟ್ರೈ ಮಾಡಬಹುದು. ಇದರಲ್ಲಿ ಉತ್ತಮ ಬರಹಗಾರರಿಗೆ ಒಳ್ಳೆಯ ಅವಕಾಶವಿದೆ. ಇಂಗ್ಲೀಷ್ ಚೆನ್ನಾಗಿ ಬರುವ ಬರಹಗಾರರು ಕೈ ತುಂಬಾ ಹಣ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ https://www.scripted.com/ ಸಾಕಷ್ಟು ಸುದ್ದಿ ಮಾಡಿದೆ.

Elance ವೆಬ್ಸೈಟ್: Elance ವೆಬ್ಸೈಟ್ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವವರಿಗೆ ಒಳ್ಳೆಯದು. ಇದು ಜನಪ್ರಿಯತೆ ಗಳಿಸ್ತಿದೆ. ಸುಮಾರು 20 ದಶಲಕ್ಷ ಜನರು ಇದರಲ್ಲಿ ಕೆಲಸ ಮಾಡ್ತಿದ್ದಾರೆ. 180 ದೇಶಗಳ ಜೊತೆ https://www.elance.com/ ಸಂಪರ್ಕದಲ್ಲಿದೆ.

ಫೀವರ್ ವೆಬ್ಸೈಟ್: ಫೀವರ್ ವೆಬ್ಸೈಟ್ ನಲ್ಲೂ ನೀವು ಹಣ ಗಳಿಸಬಹುದಾಗಿದೆ. ಡಿಜೈನ್ ನಿಂದ ಹಿಡಿದು ಅನುವಾದದವರೆಗೆ ಎಲ್ಲ ಬಗೆಯ ಕೆಲಸಗಳೂ ಇಲ್ಲಿವೆ. ಮನೆಯಲ್ಲಿ ಕುಳಿತು ಕೆಲಸ ಮಾಡುವವರನ್ನು ಸಂಪರ್ಕಿಸುವ ಈ ವೆಬ್ ಸೈಟ್ ಅದೇ ಕೆಲಸ ನೀಡುತ್ತದೆ. https://www.fiverr.com/ ನಲ್ಲಿ ಸಮಯದ ಮಿತಿ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...