alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ಫೋನ್ ಹೊಂದಿದ ಮಹಿಳೆಯರಿಗೆ ನೆರವಾಗಲಿದೆ ಈ ವಿಷಯ

mobileapps_22_1488962948_749x421

ಸ್ಮಾಟ್ಫೋನ್ ಈಗ ಎಲ್ಲರ ಕೈನಲ್ಲೂ ಇದ್ದೇ ಇರುತ್ತೆ. ಮೊಬೈಲ್ ಇದ್ಮೇಲೆ ನೆಟ್, ಅಪ್ಲಿಕೇಷನ್ಸ್ ಬಗ್ಗೆ ತಿಳಿದಿರುತ್ತೆ. ಮಹಿಳೆಯರು ಕೆಲವೊಂದು ಅಪ್ಲಿಕೇಷನ್ ಬಗ್ಗೆ ತಿಳಿದಿರುವುದು ಬಹಳ ಒಳ್ಳೆಯದು.

My SafetiPin : ಮಹಿಳೆಯರ ಸುರಕ್ಷತೆಗೆ ಈ ಆ್ಯಪ್ ಸಹಕಾರಿ. ಜಿಪಿಎಸ್ ಟ್ರ್ಯಾಕಿಂಗ್, ತುರ್ತು ಸಂಪರ್ಕ ಸಂಖ್ಯೆಗಳನ್ನು ಈ ಆ್ಯಪ್ ಹೊಂದಿದೆ. ಇದ್ರಲ್ಲಿ ಅಸುರಕ್ಷಿತ ಎಂಬ ಬಟನ್ ಪ್ರೆಸ್ ಮಾಡಿದ್ರೆ ನಿಮ್ಮ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಸಂದೇಶ ರವಾನೆಯಾಗಲಿದೆ.

Medisafe Meds & Pill Reminder : ಕೆಲಸದ ಒತ್ತಡದಲ್ಲಿ ಮಹಿಳೆಯರು ಅವಶ್ಯಕ ಮಾತ್ರೆ ತೆಗೆದುಕೊಳ್ಳೋದನ್ನು ಮರೆತುಬಿಡ್ತಾರೆ. ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡೋದನ್ನು ಮರೆಯುವವರೂ ಇದ್ದಾರೆ. ಈ ಅಪ್ಲಿಕೇಷನ್ ನಿಮ್ಮ ರಕ್ತದೊತ್ತಡ, ಗ್ಲುಕೋಸ್ ಪ್ರಮಾಣವನ್ನು ಮಾನಿಟರ್ ಮಾಡುವ ಜೊತೆಗೆ ಯಾವ ಸಮಯದಲ್ಲಿ ಯಾವ ಔಷಧಿಯ ಅಗತ್ಯವಿದೆ ಎಂಬುದನ್ನು ತಿಳಿಸುತ್ತದೆ.

Circle of 6 : ಸುರಕ್ಷತೆಗೆ ಸಂಬಂಧಿಸಿದ ಅಪ್ಲಿಕೇಷನ್ ಇದಾಗಿದೆ. ನಿಮ್ಮ ಆರು ಸ್ನೇಹಿತರನ್ನು ಈ ಸರ್ಕಲ್ ನಲ್ಲಿ ಸೇರಿಸಿಕೊಳ್ಳಬೇಕು. ಸುರಕ್ಷಿತವಲ್ಲದ ಸಮಯದಲ್ಲಿ ನೀವು ಉಚಿತವಾಗಿ ಸ್ನೇಹಿತರಿಗೆ ಸಂದೇಶ ಹಾಗೂ ಕರೆ ಮಾಡಲು ಅವಕಾಶವಿರುತ್ತದೆ. ಹಾಗೆ ನೀವು ಎಲ್ಲಿದ್ದೀರಿ ಎಂಬುದನ್ನು ಈ ಅಪ್ಲಿಕೇಷನ್ ಮೂಲಕ ಸ್ನೇಹಿತರಿಗೆ ತಿಳಿಸಬಹುದಾಗಿದೆ.

Stylebook : ಈ ಅಪ್ಲಿಕೇಷನ್ ಮಹಿಳೆಯರಿಗೆ ಇಷ್ಟವಾಗುತ್ತೆ. ಎಷ್ಟೇ ಡ್ರೆಸ್ ಇರಲಿ. ನನ್ನ ಬಳಿ ಡ್ರೆಸ್ ಇಲ್ಲ ಎನ್ನುವ ಹುಡುಗಿರು ಸಮಾರಂಭಗಳಿಗೆ ಯಾವ ಡ್ರೆಸ್ ಧರಿಸೋದು ಎಂಬ ಚಿಂತೆಗೆ ಬೀಳ್ತಾರೆ. ಆದ್ರೆ ಈ ಆ್ಯಪ್ ನಿಮ್ಮೆಲ್ಲ ಗೊಂದಲಕ್ಕೆ ಅಂತ್ಯ ಹಾಡುತ್ತದೆ. ಯಾವ ಡ್ರೆಸ್ ಸೂಕ್ತ ಎಂದು ತಿಳಿಸುತ್ತದೆ.

Period Tracker : ಮುಟ್ಟಿನ ಬಗ್ಗೆ ಈ ಆ್ಯಪ್ ಮಾಹಿತಿ ನೀಡುತ್ತದೆ. ತಿಂಗಳ ಮುಟ್ಟು ಸರಿಯಾದ ಸಮಯದಲ್ಲಿ ಆಗ್ತಿದೆಯಾ? ಯಾವ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಗರ್ಭಧಾರಣೆ ಸಾಧ್ಯ ಎಂಬೆಲ್ಲ ಮಾಹಿತಿಯನ್ನು ಈ ಆ್ಯಪ್ ನೀಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...