alex Certify
ಕನ್ನಡ ದುನಿಯಾ       Mobile App
       

Kannada Duniya

ಪುರುಷರ ಈ ಅರ್ಹತೆ ಇಷ್ಟಪಡ್ತಾರೆ ಹುಡುಗಿಯರು

ಹುಡುಗಿಯರ ಮುಖ ಸೌಂದರ್ಯ ನೋಡಿ ಹುಡುಗರು ಆಕರ್ಷಿತರಾಗ್ತಾರೆ. ಸಾಮಾನ್ಯವಾಗಿ ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಹುಡುಗಿಯರು ಹುಡುಗ್ರನ್ನು ಯಾವ ಕಾರಣಕ್ಕೆ ಇಷ್ಟಪಡ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹುಡುಗ್ರ ಯಾವ ಗುಣ ಹುಡುಗಿಯರನ್ನು ಮೊದಲು ಆಕರ್ಷಿಸುತ್ತದೆ ಎಂಬುದು ಅಧ್ಯಯನವೊಂದರಿಂದ ಹೊರ ಬಿದ್ದಿದೆ.

ಕ್ವೀನ್ಸ್ಲ್ಯಾಂಡ್ ನ ಗ್ರಿಫಿತ್ ವಿಶ್ವವಿದ್ಯಾನಿಲಯ ಈ ಬಗ್ಗೆ ಅಧ್ಯಯನ ನಡೆಸಿದೆ. ಅಧ್ಯಯನದ ಪ್ರಕಾರ ಹುಡುಗಿಯರು ಹುಡುಗ್ರ ಭೌತಿಕ ಶಕ್ತಿ ಹಾಗೂ ಶರೀರಕ್ಕೆ ಮೊದಲು ಆಕರ್ಷಿತರಾಗ್ತಾರೆ ಎಂಬ ಸಂಗತಿ ಗೊತ್ತಾಗಿದೆ. 150 ಮಹಿಳೆಯರ ಮೇಲೆ ಅಧ್ಯಯನ ನಡೆಸಿ ವಿಶ್ವವಿದ್ಯಾನಿಲಯ ಈ ವರದಿ ನೀಡಿದೆ.

ಮಹಿಳೆಯರು ಪುರುಷರ ಭೌತಿಕ ಶಕ್ತಿ ಜೊತೆಗೆ ಅವರ ಎತ್ತರದ ನಿಲುವು ಹಾಗೂ ನೇರ ದೇಹವನ್ನು ಹೆಚ್ಚು ಇಷ್ಟಪಡ್ತಾರಂತೆ. ಅಧ್ಯಯನವನ್ನು ಎರಡು ರೀತಿಯಲ್ಲಿ ನಡೆಸಲಾಯ್ತು. ಮಹಿಳೆಯರಿಗೆ ಪುರುಷರ ಫೋಟೋ ನೋಡಿ ಯಾರು ಆಕರ್ಷಿತರು ಎಂಬುದನ್ನು ಹೇಳಬೇಕಾಗಿತ್ತು.

ಬಹುತೇಕ ಮಹಿಳೆಯರು ಪುರುಷರ ದೇಹ ನೋಡಿ ಮಾರ್ಕ್ಸ್ ನೀಡಿದ್ದಾರೆ. ಕೆಲ ಮಹಿಳೆಯರು ಪುರುಷರ ಮುದ್ದು ಮುಖಕ್ಕೆ ಮಾರ್ಕ್ಸ್ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...