alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಲೈಂಗಿಕ ಆಸಕ್ತಿ ಹೆಚ್ಚಿಸುತ್ತೆ ಈ ಮಾತ್ರೆ

inext_p_LHea_23jul16P1

ಸಣ್ಣ ನೆಗಡಿಯಾದ್ರೂ ಈಗ ವೈದ್ಯರ ಬಳಿ ಓಡ್ತೇವೆ. ಸಣ್ಣ ಪುಟ್ಟ ಖಾಯಿಲೆಯಿಂದ ಹಿಡಿದು ದೊಡ್ಡ ರೋಗ ಗುಣವಾಗಬೇಕೆಂದ್ರೆ ಮಾತ್ರೆ ನುಂಗಬೇಕು. ಅನೇಕ ಮಾತ್ರೆಗಳು ಅಡ್ಡ ಪರಿಣಾಮ ಬೀರುತ್ತವೆ. ಒಂದಕ್ಕೆ ನೀಡಿದ ಮಾತ್ರೆ ದೇಹದ ಇನ್ನೊಂದು ಭಾಗವನ್ನು ದುರ್ಬಲಗೊಳಿಸುತ್ತದೆ. ಆದ್ರೆ ನಾವು ಈಗ ಹೇಳ್ತಿರುವ ಮಾತ್ರೆ ಮೂಲ ರೋಗ ಗುಣಪಡಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದ್ರೆ ಮತ್ತೊಂದು ಸಮಸ್ಯೆಯನ್ನು ಹೊಡೆದೋಡಿಸುವ ಶಕ್ತಿ ಅದಕ್ಕಿದೆ.

ಮಹಿಳೆಯರಲ್ಲಿ ಕಾಡುವ ಕೀಳರಿಮೆ ಸಮಸ್ಯೆ ನಿವಾರಣೆಗೆ Flibanserin ಹೆಸರಿನ ಮಾತ್ರೆಯನ್ನು ನೀಡಲಾಗುತ್ತದೆ. ಅಮೆರಿಕಾರ FDAಯಿಂದ ಮಾನ್ಯತೆ ಪಡೆದಿರುವ ಈ ಮಾತ್ರೆ ಮಾರುಕಟ್ಟೆಯಲ್ಲಿ Addyi ಹೆಸರಿನಲ್ಲಿ ಮಾರಾಟವಾಗ್ತಾ ಇದೆ. ಮುಟ್ಟು ನಿಲ್ಲದ, ಕೀಳರಿಮೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಈ ಮಾತ್ರೆಯನ್ನು ನೀಡಲಾಗುತ್ತದೆ.

ಈ ಮಾತ್ರೆ ಕೀಳರಿಮೆಯನ್ನು ಎಷ್ಟರ ಮಟ್ಟಿಗೆ ಕಡಿಮೆ ಮಾಡುತ್ತೆ ಎಂಬ ವಿಶ್ಲೇಷಣೆ ನಮಗೆ ಬೇಡ. ಆದ್ರೆ ಈ ಮಾತ್ರೆ ಸೇವನೆಯಿಂದ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆಯಂತೆ. ಹಾಗಾಗಿ ಇದನ್ನು ಮಹಿಳಾ ವಯಾಗ್ರ ಎಂದೂ ಕರೆಯಲಾಗ್ತಾ ಇದೆ.

ಸಾಮಾನ್ಯವಾಗಿ 40 ವರ್ಷದ ನಂತ್ರ ಮಹಿಳೆಯರಲ್ಲಿ ಲೈಂಗಿಕ ನಿರಾಸಕ್ತಿ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಅವರು ಕೀಳರಿಮೆಗೆ ತುತ್ತಾಗ್ತಾರೆ. ಆದ್ರೆ ಈ ಮಾತ್ರೆ ಸೇವನೆಯಿಂದ ಲೈಂಗಿಕ ಆಸಕ್ತಿ ಹೆಚ್ಚಾಗಿ, ಕೀಳರಿಮೆ ಕೂಡ ಕಡಿಮೆಯಾಗುತ್ತದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...