alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರೀರಿಕ ಸಂಬಂಧ ಬೆಳೆಸದೆ ಅಮ್ಮನಾಗ್ತಿದ್ದಾರೆ ಕನ್ಯೆಯರು….

ಗಂಡು-ಹೆಣ್ಣು ಕೂಡಿದ್ರೆ ಮದುವೆ. ಮದುವೆಯಾದ್ಮೇಲೆ ಮಕ್ಕಳು ಎಂಬ ಪದ್ಧತಿ ಈಗಿಲ್ಲ. ಮದುವೆಯಾಗದೇ ಅನೇಕರು ಮಕ್ಕಳನ್ನು ಪಡೆದಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಶಾರೀರಿಕ ಸಂಬಂಧ ಬೆಳೆಸದೆ ಅಂದ್ರೆ ಐವಿಎಫ್ ಮೂಲಕ ಮಕ್ಕಳನ್ನು ಪಡೆಯುವ ಮಹಿಳೆಯರ ಸಂಖ್ಯೆ ಹೆಚ್ಚಿದೆ.

ವರ್ಜಿನ್ ಬರ್ತ್ ಪ್ರವೃತ್ತಿ ಮಹಿಳೆಯರಲ್ಲಿ ಹೆಚ್ಚಾಗ್ತಿದೆ. ಮಹಿಳೆಯರು ಮದುವೆಯಾಗದೇ ಮಕ್ಕಳನ್ನು ಪಡೆಯುತ್ತಿದ್ದಾರೆ. ಯುಕೆಯಲ್ಲಿ 25ಕ್ಕೂ ಹೆಚ್ಚು ಯುವತಿಯರು ಐವಿಎಫ್ ಮಾರ್ಗ ಅನುಸರಿಸಿ ತಮ್ಮ 20ನೇ ವಯಸ್ಸಿನಲ್ಲಿಯೇ ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳನ್ನು ಪಡೆಯಲು ಇವರೆಲ್ಲ ಮಾನಸಿಕವಾಗಿ ಸಿದ್ಧರಾಗಿದ್ದರು ಎಂದು ವೈದ್ಯರು ಹೇಳಿದ್ದಾರೆ.

ಕೆಲವರಿಗೆ ಸೆಕ್ಸ್ ನಲ್ಲಿ ಆಸಕ್ತಿಯಿಲ್ಲವಂತೆ. ಮತ್ತೆ ಕೆಲ ಯುವತಿಯರು ಸೆಕ್ಸ್ ಗೆ ಹೆದರುತ್ತಾರಂತೆ. ಇನ್ನೂ ಕೆಲ ಹುಡುಗಿಯರಿಗೆ ಮಕ್ಕಳನ್ನು ನೀಡಲು ಯೋಗ್ಯವಾದ ಪುರುಷ ಸಿಗಲಿಲ್ಲವಂತೆ. ಈ ಎಲ್ಲ ಕಾರಣಗಳನ್ನು ವೈದ್ಯರ ಮುಂದಿಟ್ಟು ಐವಿಎಫ್ ಮೂಲಕ ಮಕ್ಕಳನ್ನು ಪಡೆದಿದ್ದಾರೆ ಇವರು.

ಸಿಂಗಲ್ ಮದರ್ ಆರ್ಥಿಕವಾಗಿ ಸದೃಡವಾಗಿದ್ದರೆ ಈ ಮಾರ್ಗ ಸೂಕ್ತ. ಆದ್ರೆ ಇದೇ ಪ್ರವೃತ್ತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಷ್ಟವೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಬಂಧ, ಭರವಸೆ, ನಂಬಿಕೆಗಳಿಗೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಅನೇಕರು ಸಂಬಂಧ ಬೆಳೆಸದೆ ಮಕ್ಕಳನ್ನು ಪಡೆಯಲು ಇಷ್ಟಪಡುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...