alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ವ್ಯಕ್ತಿತ್ವ ತಿಳಿಸುತ್ತೆ ಆಕೆ ಧರಿಸುವ ಚಪ್ಪಲಿ

untitled-design-13-2

ಮಹಿಳೆಯರ ಜೊತೆ ಮಾತನಾಡದೆ ಆಕೆಯ ವ್ಯಕ್ತಿತ್ವವನ್ನು ತಿಳಿಯಬಯಸ್ತಾರೆ ಅನೇಕ ಮಂದಿ. ಅದನ್ನು ತಿಳಿಯಲು ಸಾಕಷ್ಟು ಕಸರತ್ತು ಮಾಡ್ತಾರೆ. ಆದ್ರೆ ಸುಲಭವಾಗಿ ಅವರ ವ್ಯಕ್ತಿತ್ವ ಅರ್ಥವಾಗೋದಿಲ್ಲ. ಮಾತನಾಡದೆ ಆಕೆ ಚಪ್ಪಲಿ ನೋಡಿ ಮಹಿಳೆಯ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಬಹುದು.

ಇದು ಸತ್ಯ. ಸಂಶೋಧನೆಯೊಂದು ಮಹಿಳೆಯ ಚಪ್ಪಲಿ ಆಕೆ ವ್ಯಕ್ತಿತ್ವವನ್ನು ತಿಳಿಸುತ್ತೆ ಎಂಬ ವಿಷ್ಯವನ್ನು ಹೊರ ಹಾಕಿದೆ. ಅನೇಕ ಮಹಿಳೆಯರು ಹೈ ಹೀಲ್ಡ್ ಇರುವ ಚಪ್ಪಲಿ ಹಾಕ್ತಾರೆ. ಅಂತವರು ಸಮಾಜದಲ್ಲಿ ಒಂದು ಸ್ಥಾನ ಬಯಸ್ತಾರಂತೆ. ಸಂಶೋಧನೆ ಪ್ರಕಾರ ಮಹಿಳೆಯರು ತಮ್ಮ ಸ್ವಭಾವದಲ್ಲಿ ಸ್ಥಳೀಯ ಪ್ರವೃತ್ತಿಯನ್ನು ಅಳವಡಿಸಿಕೊಳ್ತಾರಂತೆ.

ನಗರದ ಶ್ರೀಮಂತ ಪ್ರದೇಶಕ್ಕೆ ಹೋಗುವ ವೇಳೆ ಹೈ ಹೀಲ್ಡ್ ಚಪ್ಪಲಿ ಧರಿಸ್ತಾರೆ ಮಹಿಳೆಯರು. ಅದೇ ಆರ್ಥಿಕವಾಗಿ ಹಿಂದುಳಿದ ಸ್ಥಳಗಳಿಗೆ ಹೋಗುವ ವೇಳೆ ಹೈ ಹೀಲ್ಡ್ ಧರಿಸಲು ಇಷ್ಟಪಡುವುದಿಲ್ಲ. ಸೀದಾ ಸಾದಾ ಚಪ್ಪಲಿ ಧರಿಸ್ತಾರೆ ಮಹಿಳೆಯರು.

ಅಮೆರಿಕಾದ ಉತ್ತರ ಕೆರೊಲಿನಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಪ್ರಕಾರ, ಹೆಚ್ಚಿನ ಮಹಿಳೆಯರು ಶ್ರೀಮಂತರಾಗಲು ಬಯಸ್ತಾರಂತೆ. ಹಾಗಾಗಿ ಶ್ರೀಮಂತರಿರುವ ಪ್ರದೇಶಕ್ಕೆ ಹೋಗುವ ವೇಳೆ ಅಲ್ಲಿನ ಮಹಿಳೆಯರಿಗೆ ಮ್ಯಾಚ್ ಆಗುವ ರೀತಿಯಲ್ಲಿ ಹೈ ಹೀಲ್ಡ್ ಧರಿಸಿ ಹೋಗ್ತಾರೆ ಮಹಿಳೆಯರು. ಮೊದಲಿನಿಂದಲೂ ಈ ಹೋರಾಟ ನಡೆಯುತ್ತಿದೆ. ಶಕ್ತಿಶಾಲಿ ವ್ಯಕ್ತಿ ಎದುರು ನಿಲ್ಲಲು ಇಷ್ಟಪಡ್ತಾರೆಂದು ಪ್ರೊಫೆಸರ್ ಸಂಶೋಧನೆಯಲ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...