alex Certify
ಕನ್ನಡ ದುನಿಯಾ       Mobile App
       

Kannada Duniya

12 ತಿಂಗಳಲ್ಲೇ ಮಹಿಳೆಯರಿಗೆ ಬೋರಾಗುತ್ತೆ ಸೆಕ್ಸ್

ಹೊಸ ಸಂಶೋಧನೆಯೊಂದು ಆಶ್ಚರ್ಯಕರ ವಿಷ್ಯವನ್ನು ಹೊರ ಹಾಕಿದೆ. ಒಂದು ವರ್ಷದಲ್ಲಿಯೇ ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವಿಚಾರದಲ್ಲಿ ಮಹಿಳೆಯರು ಬೋರ್ ಆಗ್ತಾರಂತೆ. ದೀರ್ಘಕಾಲದ ಸಂಬಂಧದಲ್ಲಿ ಮಹಿಳೆಯರು ಶಾರೀರಿಕ ಸಂಬಂಧಕ್ಕೆ ಹೆಚ್ಚು ಮಹತ್ವ ನೀಡುವುದಿಲ್ಲವೆಂದು ಸಂಶೋಧನೆ ಹೇಳಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್ ಫ್ರಾನ್ಸಿಸ್ಕೋ ವಿಜ್ಞಾನಿಗಳು ಕೆಲ ಸಂಶೋಧನೆಗಳನ್ನು ಮಾಡಿದ್ದಾರೆ. ಬ್ರಿಟನ್ ನ 11,508 ಜನರ ಮೇಲೆ ಸರ್ವೆ ನಡೆಸಿದ್ದಾರೆ. ಮಹಿಳೆಯರು ಲೈಂಗಿಕ ಅಭಿರುಚಿಯನ್ನು ಬಹುಬೇಗ ಕಳೆದುಕೊಳ್ತಾರೆಂದು ಸಂಶೋಧನೆ ಹೇಳಿದೆ. ಆದ್ರೆ ಪುರುಷರು ಇದಕ್ಕೆ ವಿರುದ್ಧವಾಗಿರುತ್ತಾರಂತೆ.

ಸಂಶೋಧನೆಯಲ್ಲಿ 6,669 ಮಹಿಳೆಯರು ಹಾಗೂ 4,839 ಪುರುಷರಿದ್ದರು. ಒಂದು ವರ್ಷದ ನಂತ್ರ ಸೆಕ್ಸ್ ಮೇಲೆ ಆಸಕ್ತಿ ಹೋಗಿದೆ ಎಂಬುದನ್ನು ಬಹುತೇಕ ಮಹಿಳೆಯರು ಒಪ್ಪಿಕೊಂಡಿದ್ದಾರೆ. ಆದ್ರೆ ಪುರುಷರು ಇದನ್ನು ಒಪ್ಪಿಕೊಂಡಿಲ್ಲ.

ನಿಯಮಿತವಾಗಿ ಶಾರೀರಿಕ ಸಂಬಂಧ ಬೆಳೆಸುವುದ್ರಿಂದ ಮಹಿಳೆಯರ ಒತ್ತಡ ಕಡಿಮೆಯಾಗುತ್ತದೆ. ಪ್ರತಿರಕ್ಷಣಾ ಶಕ್ತಿ ಹೆಚ್ಚಾಗುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ವಯಸ್ಸು ಹೆಚ್ಚಾದಂತೆ ಸೆಕ್ಸ್ ಮೇಲಿನ ಆಸಕ್ತಿ ಮತ್ತಷ್ಟು ಕಡಿಮೆಯಾಗುತ್ತದೆ. ಪುರುಷರಿಗೆ ಹೋಲಿಸಿದ್ರೆ ಮಹಿಳೆಯರಲ್ಲಿ ಇದು ಹೆಚ್ಚು. ಮಧ್ಯವಯಸ್ಸಿನ ಮಹಿಳೆಯರು ಮನೆ ಹಾಗೂ ವೃತ್ತಿ ಎರಡೂ ನೋಡಿಕೊಳ್ಳುವುದೂ ಪ್ರಮುಖ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...