alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮಹಿಳೆ ನೆಟ್ಟ ಗಿಡಗಳೆಷ್ಟು ಗೊತ್ತಾ..?

plantingನವದೆಹಲಿಯ ಮುನ್ಸಿಪಲ್ ಕೌನ್ಸಿಲ್ (ಎನ್ ಡಿ ಎಮ್ ಸಿ) ಕೇವಲ 15 ದಿನಗಳಲ್ಲಿ 1.15 ಲಕ್ಷ ಸಸಿಗಳನ್ನು ನೆಟ್ಟು ಎಲ್ಲರಿಗೂ ಮಾದರಿಯಾಯಿತು. ಇಂತಹ ಹಲವಾರು ಪರೋಪಕಾರಿ ಕಾರ್ಯಕ್ರಮಗಳು ಸಮಾಜದ ಎದುರು ಬರದೇ ಮರೆಯಲ್ಲೇ ನಿಂತು ಪ್ರಕೃತಿಯ ಒಳಿತಿನ ಮೂಲಕ ಜನರಿಗೂ ಒಳಿತು ಬಯಸುತ್ತವೆ. ಅಂತಹ ಒಂದು ಕಾರ್ಯ, ಕಾರ್ಯಸಾಧಕಿಯ ಪರಿಚಯ ಇಲ್ಲಿದೆ.

ರಾಧಿಕಾ ಆನಂದ್, ವಾಯುಪಡೆ ಅಧಿಕಾರಿಯ ಮಗಳು. ಇವರು ಕಳೆದ ಒಂದು ವರ್ಷದಲ್ಲಿ ಸುಮಾರು 1,10,000 ಹಣ್ಣಿನ ಮರಗಳನ್ನು ನೆಟ್ಟಿದ್ದಾರೆ. ಇವರು ಉತ್ತರ ಭಾರತ, ರಾಜಸ್ಥಾನ, ಮಹಾರಾಷ್ಟ್ರ ಮುಂತಾದೆಡೆಗಳಲ್ಲಿ ಮಾವು, ಹುಣಸೆ, ಗೂಸ್ ಬೆರಿ, ಬ್ಲ್ಯಾಕ್ ಬೆರಿ, ಹಲಸು ಮುಂತಾದವುಗಳನ್ನು ನೆಟ್ಟಿದ್ದಾರೆ.

ಇವರು ತಮ್ಮ ಪರಿಸರ ಪ್ರೇಮಕ್ಕೆ ಪ್ಲಾಂಟಾಲಜಿ ಎಂದು ಹೆಸರಿಟ್ಟಿದ್ದಾರೆ. ಇಂತಹ ಹಸಿರು ಹಸಿರಾದ ಪರಿಸರ ಅವರನ್ನು ಬಾಲ್ಯಕ್ಕೆ ನೂಕುತ್ತದೆಯಂತೆ. ರಾಧಿಕಾ ತಮ್ಮ ಎಲ್ಲ ಕನಸುಗಳನ್ನು ತಮ್ಮ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದ್ದಾರೆ. 2006ರಿಂದ ಇವರು, ದೆಹಲಿ ಸರಕಾರದ ಸಹಯೋಗದೊಂದಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸುಮಾರು 500 ವರ್ಕ್ ಶಾಪ್ ಗಳನ್ನು ಮಾಡಿದ್ದಾರೆ.

ಈ ಎಲ್ಲ ಗಿಡಗಳಿಂದ ಬರುವ ಉತ್ಪನ್ನವನ್ನು ರಾಧಿಕಾ ತಮ್ಮ ಮುಂದಿನ ಯೋಜನೆಯಾದ ‘ಫಾಲ್ವಾನ್’ ಗಾಗಿ ಮೀಸಲಿಟ್ಟಿದ್ದಾರೆ. ಫಾಲ್ವಾನ್ ಪ್ರೊಜೆಕ್ಟ್ ನಲ್ಲಿ ಅವರು 2,00,000 ಸಸಿ ನೆಡುವ ಪಣ ತೊಟ್ಟಿದ್ದಾರೆ. ಈ ಫಾಲ್ವಾನ್ ಅನ್ನು ಅವರು ಸೆಂಟರ್ ಫಾರ್ ಆರ್ಮ್ಡ್ ಫೋರ್ಸಸ್ ಹಿಸ್ಟಾರಿಕಲ್ ರಿಸರ್ಚ್ (CAFHR)ನ ‘ಇಂಡಿಯಾ ರಿಮೆಂಬರ್ಸ್‘ ಕಾರ್ಯಕ್ರಮದಡಿ ನಡೆಸಲಿದ್ದಾರೆ. ಇದು ದೇಶಕ್ಕಾಗಿ ಪ್ರಾಣತೆತ್ತ ಯೋಧರ ಸ್ಮರಣಾರ್ಥವಾಗಿ ಸಸಿ ನೆಡುವ ಕಾರ್ಯಕ್ರಮವಾಗಿದೆ. ನನ್ನ ಈ ಕನಸು ಎಲ್ಲರ ಕನಸಾಗಲಿ ಎಲ್ಲರೂ ಇದಕ್ಕೆ ಕೈಗೂಡಿಸಲಿ ಎಂಬುದು ರಾಧಿಕಾ ಅವರ ಹಂಬಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...