alex Certify
ಕನ್ನಡ ದುನಿಯಾ       Mobile App
       

Kannada Duniya

ಕಲೆಯಿರುವ ಹೊಟ್ಟೆ ಫೋಟೋ ಪೋಸ್ಟ್ ಮಾಡಿ ಇಂಥ ಸಂದೇಶ ಸಾರಿದ್ಲು

ಸೌಂದರ್ಯಕ್ಕೆ ಅತಿ ಹೆಚ್ಚು ಮಹತ್ವ ನೀಡುವ ಸಮಯವಿದು. ಸಣ್ಣ ಕಲೆ ಕೂಡ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುತ್ತೆ ಎಂದುಕೊಳ್ತಾರೆ ಜನರು. ಇಂಥ ಸಮಯದಲ್ಲಿ ಮಹಿಳೆಯೊಬ್ಬಳು ಈ ಭಾಗವನ್ನು ಹೆಮ್ಮೆಯಿಂದ ಎಲ್ಲರಿಗೂ ತೋರಿಸಿದ್ದಾಳೆ.

ಇಂಗ್ಲೆಂಡ್ ನಿವಾಸಿ ಎಮಿಲಿ ನವೆಂಬರ್ 2017ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಎಮಿಲಿಗೆ ಇನ್ನೂ 19 ವರ್ಷ. ಎಮಿಲಿಗೆ ಆಪರೇಷನ್ ಮಾಡಿ ಮಕ್ಕಳನ್ನು ತೆಗೆಯಲಾಗಿದೆ. ಅದ್ರ ಕಲೆ ಹೊಟ್ಟೆ ಮೇಲೆ ಹಾಗೆ ಇದೆ. ಇದ್ರ ಜೊತೆಗೆ ಎಮಿಲಿ ಗರ್ಭಿಣಿಯಾದಾಗ ಕಾಣಿಸಿಕೊಂಡ ಸ್ಟ್ರೆಚ್ ಮಾರ್ಕ್ಸ್ ಹೋಗಿಲ್ಲ. ಎಮಿಲಿ ಈ ಕಲೆಯ ಕೆಲ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ.

ಇದ್ರ ಜೊತೆಗೆ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಶೀರ್ಷಿಕೆ ಹಾಕಿದ್ದಾಳೆ. ಇದು ಬಹಳ ಖಾಸಗಿ ಪೋಸ್ಟ್. ಹೆರಿಗೆಯಾಗಿ ನಾಲ್ಕು ತಿಂಗಳು ಕಳೆದಿದೆ. 9 ತಿಂಗಳುಗಳ ಕಾಲ ಇಬ್ಬರು ಮಕ್ಕಳನ್ನು ಹೊಟ್ಟೆಯಲ್ಲಿ ಹೊತ್ತಿದ್ದೆ. ಆಗ ಸಾಕಷ್ಟು ಕಷ್ಟ ಅನುಭವಿಸಿದ್ದೇನೆ. ಈಗ ತಾಯ್ತನದ ಸುಖ ಅನುಭವಿಸುತ್ತಿದ್ದೇನೆ. ಹೆರಿಗೆ ನಂತ್ರ ಸಾಕಷ್ಟು ಬದಲಾವಣೆಯಾಗಿದೆ. ಹೊಟ್ಟೆ ಮೇಲಿರುವ ಕಲೆ ನನ್ನ ಪರಿಚಯವಲ್ಲ, ಹೊಟ್ಟೆ ಮೇಲಿರುವ ಸ್ಟ್ರೆಚ್ ಮಾರ್ಕ್ಸ್ ನನ್ನ ಪರಿಚಯವಲ್ಲ. ಏರುತ್ತಿರುವ ತೂಕ ಕೂಡ ನನ್ನ ಪರಿಚಯವಲ್ಲವೆಂದು ಎಮಿಲಿ ಬರೆದಿದ್ದಾಳೆ.

ಕಲೆ, ತೂಕದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬೇಡಿ. ಹೆರಿಗೆ ನಂತ್ರ ಇದೆಲ್ಲ ಸಾಮಾನ್ಯ ಎಂಬುದು ಎಮಿಲಿ ಸಂದೇಶವಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...