alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಶ್ವವಾಯು ಪತಿಗೆ ವಿಚ್ಛೇದನ ನೀಡಿ 2 ನೇ ಮದುವೆಯಾದ್ರೂ ಕರ್ತವ್ಯ ಬಿಡಲಿಲ್ಲ ಮಹಿಳೆ

ಮಹಿಳೆಯೊಬ್ಬಳು ತನ್ನ ಪಾರ್ಶ್ವವಾಯು ಪತಿಗೆ ವಿಚ್ಛೇದನ ನೀಡಿದ್ದಾಳೆ. ನಂತ್ರ ತನ್ನ ಸ್ನೇಹಿತನೊಬ್ಬನ ಜೊತೆ ಮದುವೆಯಾಗಿದ್ದಾಳೆ. ಇಷ್ಟಕ್ಕೆ ಕಥೆ ಮುಗಿಯಲಿಲ್ಲ. ಮೊದಲ ಹಾಗೂ 2ನೇ ಪತಿ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದಾಳೆ. ಮಹತ್ವದ ಉದ್ದೇಶದೊಂದಿಗೆ ಮಹಿಳೆ ಮಾಡಿದ ಈ ಕೆಲಸಕ್ಕೆ ಸಂಬಂಧಿಕರು ಬೇಷ್ ಎಂದಿದ್ದಾರೆ.

ಇದು ಚೀನಾದ ಕುಟುಂಬದ ಕಥೆ. ಷಿ ಶಿಪ್ಪಿಂಗ್ ಪತಿ ಷು ಶಿಹಾನ್ ಗಣಿಯೊಂದರಲ್ಲಿ ಕೆಲಸ ಮಾಡ್ತಿದ್ದ. ದುರ್ಘಟನೆಯೊಂದರಲ್ಲಿ ಆತನಿಗೆ ಪಾರ್ಶ್ವವಾಯು ಕಾಣಿಸಿದೆ. ನಂತ್ರ ಷು ಶಿಹಾಗ್ ಹಾಸಿಗೆಯಲ್ಲಿಯೇ ಮಲಗುವಂತಾಗಿದೆ. ಘಟನೆ ನಂತ್ರ ಪತ್ನಿ ಶಿಹಾಗ್ ಸೇವೆ ಮಾಡ್ತಿದ್ದಳಂತೆ. ಆದ್ರೆ ಷುಗೆ ಪತ್ನಿ ಬಿಟ್ಟು ಹೋದರೆ ಎಂಬ ಭಯ ಕಾಡುತ್ತಿತ್ತಂತೆ. ಜೊತೆಗೆ ಪತ್ನಿ ಜೀವನ ಇಷ್ಟಕ್ಕೆ ಮುಗಿದು ಹೋದ್ರೆ ಎಂಬ ಚಿಂತೆ ಬೆನ್ನು ಹತ್ತಿತ್ತಂತೆ.

ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಷು ನನಗೆ ವಿಚ್ಛೇದನ ನೀಡಿ ಬೇರೆ ಮದುವೆ ಆಗುವಂತೆ ಷಿಗೆ ಹೇಳಿದ್ದ. ಅಂತೂ ಇಂತೂ ಷಿ ಇದಕ್ಕೆ ಒಪ್ಪಿದ್ದಳು. ಆದ್ರೆ ಒಂದು ಷರತ್ತು ವಿಧಿಸಿದಳು. ಮದುವೆ ನಂತ್ರವೂ ಮೊದಲ ಪತಿ ಸೇವೆ ಮಾಡುತ್ತೇನೆ ಎಂದು ಷಿ ಹೇಳಿದ್ದಳಂತೆ. ಇದಕ್ಕೆ ಷು ಆಪ್ತ ಸ್ನೇಹಿತ ಒಪ್ಪಿ ಷಿ ಕೈ ಹಿಡಿದನಂತೆ. ಈಗ ಎಲ್ಲರೂ ಒಟ್ಟಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಪಿ ಮಾಜಿ ಪತಿ ಷು ಸೇವೆ ಮುಂದುವರೆಸಿದ್ದಾಳೆ. ಸಿನಿಮಾದಂತಿರುವ ಈ ಕಥೆ ಕೆಲವರಿಗೆ ಮಾದರಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...