alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ ಮಹಿಳೆಯರು ಪತಿಗೆ ಮೋಸ ಯಾಕೆ ಮಾಡ್ತಾರೆ ?

ಮದುವೆಯಾದ ಮಹಿಳೆ ಬೇರೊಬ್ಬನ ಜೊತೆ ಪರಾರಿ. ಪ್ರಿಯತಮನಿಗಾಗಿ ಪತಿಯನ್ನೇ ಕೊಂದ ಪತ್ನಿ. ಹೀಗೆ ಆಗಾಗ ಸುದ್ದಿಗಳು ಬರ್ತಾನೆ ಇರುತ್ವೆ. ಮದುವೆಯಾದ ಮಹಿಳೆ ತನ್ನ ಪತಿಗೆ ಮೋಸ ಮಾಡಲು ಅನೇಕ ಕಾರಣಗಳಿವೆ.

ಸಂಸಾರವೊಂದು ಮುರಿದು ಬಿದ್ದರೆ ಅದಕ್ಕೆ ಪುರುಷ ಕಾರಣ ಎಂದು ಮೊದಲು ಹೇಳಲಾಗ್ತಾ ಇತ್ತು. ಆದ್ರೆ ಈಗ ಮಹಿಳೆ ಕೂಡ ಮೋಸ ಮಾಡ್ತಿದ್ದಾಳೆ. ಇದಕ್ಕೆ ಮೂಲ ಕಾರಣ ಅಸಮಾಧಾನ.

ಪರಸ್ಪರ ಸಂಭಾಷಣೆಯ ಕೊರತೆ

ಮಹಿಳೆ ತನ್ನ ಪತಿ ನನ್ನ ಜೊತೆ ಸಾಕಷ್ಟು ಮಾತನಾಡಬೇಕೆಂದು ಬಯಸುತ್ತಾಳೆ. ಪತಿ ಕೂಡ ಎಲ್ಲವನ್ನೂ ಹೇಳಬೇಕೆಂದು ಆಶಿಸುತ್ತಾಳೆ. ಆದ್ರೆ ಮಾತು ಕಡಿಮೆಯಾದಾಗ ಸಂಶಯ ಹೆಚ್ಚಾಗುತ್ತದೆ. ಮೋಸ ಮಾಡುವ ಸಂಭವ ಜಾಸ್ತಿ ಇರುತ್ತದೆ.

ಹಳೆ ಸಂಬಂಧ

ಒಬ್ಬನನ್ನು ಪ್ರೀತಿ ಮಾಡಿ ಇನ್ನೊಬ್ಬನನ್ನು ಮದುವೆಯಾಗಿದ್ದರೆ, ಮಹಿಳೆ ಮದುವೆಯಾದ ನಂತರ ಮೋಸ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಮೊದಲ ಪ್ರೀತಿ ಮರೆಯಲು ಸಾಧ್ಯವಾಗದೆ ಆಕೆ ಬಲವಂತವಾಗಿ ಮೋಸ ಮಾಡಲು ಶುರುಮಾಡುತ್ತಾಳೆ.

ಸಂಘರ್ಷ

ಎತ್ತು ಏರಿಗೆ, ಕೋಣ ನೀರಿಗೆ ಎನ್ನುವ ಹಾಗೆ ವಿಚಾರದಲ್ಲಿ ಭಿನ್ನತೆ ಕಂಡು ಬಂದಾಗ ಸಂಘರ್ಷಗಳಾಗುವುದು ಸಹಜ. ಇಬ್ಬರೂ ಹಠಕ್ಕೆ ನಿಂತು ಜಗಳ ಮಾಡಿದಾಗ ದಾಂಪತ್ಯದಲ್ಲಿ ಬಿರುಕು ಕಾಣಲಾರಂಭಿಸುತ್ತದೆ. ತನಗೆ, ತನ್ನ ವಿಚಾರಗಳಿಗೆ ಮನ್ನಣೆ ನೀಡುವ ವ್ಯಕ್ತಿಯತ್ತ ಮಹಿಳೆ ಆಕರ್ಷಿತಳಾಗುತ್ತಾಳೆ.

ವಿಶ್ವಾಸದ ಕೊರತೆ

ಕೆಲ ಪುರುಷರಿಗೆ ಹೆಂಡತಿ ಮೇಲೆ ವಿಶ್ವಾಸವಿರುವುದಿಲ್ಲ. ಎಲ್ಲ ವಿಚಾರದಲ್ಲೂ ಅನವಶ್ಯಕವಾಗಿ ಸಂಶಯ ಪಡುತ್ತಿರುತ್ತಾರೆ. ಈ ಕಾರಣದಿಂದ ಬೇಸತ್ತ ಮಹಿಳೆಯರು ಮೋಸ ಮಾಡಲು ಶುರುಮಾಡುತ್ತಾರೆ.

ಲೈಂಗಿಕ ಅಸಮಾಧಾನ

ಕೆಲವು ಮಹಿಳೆಯರು ತಮ್ಮ ಗಂಡನ ಜೊತೆ ಶಾರೀರಿಕ ಸಂಬಂಧದಲ್ಲಿ ತೃಪ್ತರಾಗುವುದಿಲ್ಲ. ಈ ನಿರಾಸೆ ಅವರಿಗೆ ಮೋಸ ಮಾಡಲು ಹಾಗೂ ಬೇರೆ ದಾರಿ ಹುಡುಕಲು ಪ್ರೇರೇಪಣೆ ನೀಡುತ್ತದೆ.

ಒಂಟಿತನ

ಅನೇಕ ಪುರುಷರು ಪತ್ನಿಗೆ ಸಾಕಷ್ಟು ಸಮಯ ನೀಡುವುದಿಲ್ಲ. ಪ್ರತಿದಿನ ಒಂದೇ ರೀತಿಯ ಕೆಲಸ ಮಾಡಿ ಮಹಿಳೆಯರು ಬೇಸರಗೊಂಡಿರುತ್ತಾರೆ. ಒಂಟಿಯಾಗಿದ್ದು ಬೇಸರಗೊಂಡಿರುವ ಮಹಿಳೆಯರು ಹೊರಗಿನ ಜಗತ್ತಿಗೆ ಆಕರ್ಷಿತರಾಗುತ್ತಾರೆ. ಬೇಗ ಪರ ಪುರುಷನೊಂದಿಗೆ ಸಂಬಂಧ ಬೆಳೆಸುವ ಸಾಧ್ಯತೆಯೂ ಇರುತ್ತದೆ.

ಆತ್ಮ ವಿಶ್ವಾಸಕ್ಕೆ ಧಕ್ಕೆ

ಮಹಿಳೆ ಸದಾ ಸುಂದರವಾಗಿರಲು ಬಯಸುತ್ತಾಳೆ. ಪತಿಯಾದವನು ಆಕೆಯ ಸೌಂದರ್ಯವನ್ನು ಮೆಚ್ಚಿಕೊಳ್ಳಬೇಕೆಂದು ಬಯಸುತ್ತಾಳೆ. ಆದ್ರೆ ಆಕೆಯನ್ನು ತಿರಸ್ಕರಿಸಿ, ಆಕೆಯ ಸೌಂದರ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಮಹಿಳೆ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟಾಗುತ್ತದೆ.

ಪ್ರತೀಕಾರ

ಪತಿ, ಪತ್ನಿಯ ಭರವಸೆಯನ್ನು ಹಾಳು ಮಾಡಿದ್ದರೆ ಪತ್ನಿಯಾದವಳು ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ. ಆತನಿಗೆ ನೋವು ನೀಡುವ ಉದ್ದೇಶದಿಂದ ಮೋಸ ಮಾಡಲು ಶುರುಮಾಡುತ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...