alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ ಮಹಿಳೆಗ್ಯಾಕೆ ಆಕರ್ಷಿತನಾಗ್ತಾನೆ ಪುರುಷ?

ಹುಡುಗಿಯರಿಗಿಂತ ಆಂಟಿಯರಿಗೆ ಹುಡುಗರು ಆಕರ್ಷಿತರಾಗೋದು ಜಾಸ್ತಿ. ಕೆಲ ಹುಡುಗರು ಮದುವೆಯಾದ ಮಹಿಳೆ ಜೊತೆ ಡೇಟಿಂಗ್ ಗೆ ಹೋಗಲು ಇಷ್ಟಪಡ್ತಾರೆ. ಹಾಗಾದ್ರೆ ಮದುವೆಯಾದ ಮಹಿಳೆಯರಲ್ಲಿ ಅಂತಾ ವಿಶೇಷತೆಗಳೇನಿವೆ ಎಂಬುದರ ಸಣ್ಣ ವಿಶ್ಲೇಷಣೆ ಇಲ್ಲಿದೆ.

ಸಾಮಾನ್ಯವಾಗಿ ಮದುವೆಯಾದ ನಂತರ ಮಹಿಳೆಯರಲ್ಲಿ ಸುರಕ್ಷತೆಯ ಭಾವ ಮೂಡುತ್ತದೆ. ಹಾಗೆ ಮದುವೆ ನಂತ್ರ ಮಹಿಳೆಯರ ಸೌಂದರ್ಯ ಇಮ್ಮಡಿಗೊಳ್ಳುತ್ತಂತೆ. ಇದನ್ನು ಅಧ್ಯಯನವೂ ಒಪ್ಪಿಕೊಂಡಿದೆ. ಅನೇಕ ಪುರುಷರು ಕೂಡ ಇದಕ್ಕೆ ಸಹಿ ಹಾಕಿದ್ದಾರೆ.

ಗೃಹಿಣಿಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮದುವೆಯಾಗದ ಹಾಗೂ ಮದುವೆಯಾದ ಮಹಿಳೆಯರನ್ನು ತುಲನೆ ಮಾಡಿ ನೋಡಿದಾಗ ನಿಮಗೆ ಈ ಅಂತರ ಗೊತ್ತಾಗುತ್ತದೆ. ಆತ್ಮವಿಶ್ವಾಸದಿಂದ ನಡೆಯುವ ಅವರು ಪುರುಷರಿಗೆ ಇಷ್ಟವಾಗಿ ಬಿಡುತ್ತಾರೆ. ಮದುವೆಯಾದ ಮಹಿಳೆಯರು ಪುರುಷರ ಸೈಕಾಲಜಿಯನ್ನು ಅರ್ಥ ಮಾಡಿಕೊಂಡಿರುತ್ತಾರೆ. ಭಾವನಾತ್ಮಕ ಅಗತ್ಯತೆಗಳನ್ನು ಅರಿತು ಕೆಲಸ ಮಾಡ್ತಾರೆ.

ಯಾವುದು ಸುಲಭವಾಗಿ ಸಿಗುವುದಿಲ್ಲವೋ ಅದನ್ನು ಪಡೆಯಬೇಕೆನ್ನುವ ಹಂಬಲ ಮಾನವನ ಸಹಜ ಗುಣ. ಹಾಗಾಗಿಯೇ ಪುರುಷರು ಮದುವೆಯಾದ ಮಹಿಳೆಯರ ಹಿಂದೆ ಬೀಳ್ತಾರೆ. ಇದಲ್ಲದೆ, ಮದುವೆಯಾದ ಮಹಿಳೆಯರು ತಮ್ಮ ಸ್ಕಿನ್ ಬಗ್ಗೆ ಅಷ್ಟು ಗಮನ ನೀಡುವುದಿಲ್ಲ. ಗ್ಲಾಮರ್ ಲೋಕ ಹೊರತು ಪಡಿಸಿದ್ರೆ ಸಾಕಷ್ಟು ಮಹಿಳೆಯರು ತಮ್ಮನ್ನು ತಾವು ಸಮರ್ಥವಾಗಿ ನಿಭಾಯಿಸಲು ಕಲಿತಿರುತ್ತಾರೆ. ಹಾಗಾಗಿಯೇ ಪುರುಷರು ಅವರನ್ನು ಮತ್ತಷ್ಟು ಪ್ರೀತಿಸ್ತಾರೆ.

ಮದುವೆ ನಂತ್ರ ಮಹಿಳೆಯರು ಹೆಚ್ಚು ಕಾಳಜಿ ತೋರಿಸ್ತಾರೆ. ಇತರರಿಗೆ ಕಾಳಜಿ ತೋರಿಸುವ ಜೊತೆಗೆ ತಮ್ಮನ್ನು ಸರಿಯಾಗಿ ಮೆಂಟೇನ್ ಮಾಡಿಕೊಳ್ತಾರೆ. ಅನೇಕ ಕೆಲಸಗಳನ್ನು ಒಟ್ಟಿಗೆ ಮಾಡುವುದನ್ನು ಅವರು ಕಲಿತಿರುತ್ತಾರೆ. ಅವರ ಮಾತು ಸ್ಪಷ್ಟವಾಗಿರುತ್ತದೆ. ಇದೆಲ್ಲವೂ ಪುರುಷ ಆಕೆಗೆ ಆಕರ್ಷಿತನಾಗಲು ಕಾರಣ.

ಮದುವೆ ನಂತ್ರ ಮಹಿಳೆಯರ ಹಾರ್ಮೋನ್ ನಲ್ಲಿ ಕೆಲವೊಂದು ಬದಲಾವಣೆಯಾಗುತ್ತದೆ. ಇದು ಅವರು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗೆ ಸಂತೋಷ ಕೂಡ ಅವರ ಸೌಂದರ್ಯವನ್ನು ವೃದ್ಧಿಸುತ್ತದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...