alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಕಡಿಮೆಯಾಗುತ್ತೆ ಲೈಂಗಿಕ ಆಸಕ್ತಿ

ಪ್ರಾಮಾಣಿಕವಾಗಿ ಹೇಳೋದಾದ್ರೆ ಲೈಂಗಿಕ ಜೀವನದ ಮೇಲೆ ಎಲ್ಲರೂ ಆಸಕ್ತರಾಗಿರುತ್ತಾರೆ. ಆದ್ರೆ ಈ ಜೀವನದಲ್ಲಿ ಕೂಡ ಅನೇಕರು ಆಸಕ್ತಿ ಕಳೆದುಕೊಳ್ತಾರೆ.  ಇತ್ತೀಚಿನ ಅಧ್ಯಯನವೊಂದು ಆಸಕ್ತಿ ಕಳೆದುಕೊಳ್ಳಲು ಕಾರಣವೇನು ಎಂಬುದನ್ನು ಹೇಳಿದೆ.

ಈ ಬಗ್ಗೆ ಆನ್ಲೈನ್ ಜರ್ನಲ್ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ 4839 ಪುರುಷರು ಹಾಗೂ 6669 ಮಹಿಳೆಯರು ಪಾಲ್ಗೊಂಡಿದ್ದರು. 17ರಿಂದ 75 ವರ್ಷ ವಯಸ್ಸಿನವರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇದ್ರಲ್ಲಿ ಪಾಲ್ಗೊಂಡಿದ್ದ ಶೇಕಡಾ 15ರಷ್ಟು ಪುರುಷರು ಹಾಗೂ ಶೇಕಡಾ 34ರಷ್ಟು ಮಹಿಳೆಯರು ಲೈಂಗಿಕ ಆಸಕ್ತಿ ಕಳೆದುಕೊಂಡಿರುವುದನ್ನು ಪ್ರಾಮಾಣಿಕವಾಗಿ ಹೇಳಿದ್ದರು.

ವಯಸ್ಸಿಗೆ ಸಂಬಂಧಿಸಿದ ಸಮಸ್ಯೆ ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಲೈಂಗಿಕ ಆಸಕ್ತಿ ಕಳೆದುಕೊಳ್ಳಲು ಮುಖ್ಯ ಕಾರಣ ಎಂದು ಮಹಿಳೆ ಹಾಗೂ ಪುರುಷರಿಬ್ಬರೂ ಒಪ್ಪಿಕೊಂಡಿದ್ದಾರೆ. ಒಂದು ಸಮಯದಲ್ಲಿ ಒತ್ತಡ ಹೇರಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದ ಪುರುಷರು ಈಗ ಆಸಕ್ತಿ ಕಡಿಮೆಯಾಗಿದೆ ಎಂದಿದ್ದಾರೆ.

ಶಾರೀರಿಕ ಸಂಬಂಧದಿಂದ ದೂರವಿರುವ ದಂಪತಿ ಮಾನಸಿಕವಾಗಿ ಸಂಗಾತಿಯೊಡನೆ ಹತ್ತಿರವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಕೈ ಹಿಡಿದುಕೊಳ್ಳುವುದು, ತಬ್ಬಿಕೊಳ್ಳುವುದು,ಸ್ಪರ್ಶಿಸುವ ಮೂಲಕ ಪ್ರೀತಿ ಹೆಚ್ಚಾಗುವ ಜೊತೆಗೆ ಲೈಂಗಿಕ ಜೀವನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...