alex Certify
ಕನ್ನಡ ದುನಿಯಾ       Mobile App
       

Kannada Duniya

ವಾರಗಳ ಕಾಲ ಒಂದೇ ಒಳಉಡುಪು ಧರಿಸ್ತಾರೆ ಪುರುಷರು..!

underwear_1489727084

ಪುರುಷರಿಗಿಂತ ಮಹಿಳೆಯರು ಸ್ವಚ್ಛವಾಗಿರ್ತಾರೆ. ಇದನ್ನು ನಾವು ಹೇಳ್ತಾ ಇಲ್ಲ ಸ್ವಾಮಿ. ಸರ್ವೆ ಹೇಳ್ತಾ ಇದೆ. ಒಳ ಉಡುಪು ವಿಚಾರಕ್ಕೆ ಸಂಬಂಧಿಸಿದಂತೆ YouGov ಇಂಟರ್ನೆಟ್ ಮಾರ್ಕೆಟ್ ಸಂಶೋಧನಾ ಪೋರ್ಟಲ್ ಸಮೀಕ್ಷೆ ನಡೆಸಿದೆ. ಅದ್ರ ಪ್ರಕಾರ, ಶೇಕಡಾ 93ರಷ್ಟು ಮಹಿಳೆಯರು ಒಮ್ಮೆ ಧರಿಸಿದ ಒಳ ಉಡುಪನ್ನು ತೊಳೆಯದೇ ಮತ್ತೆ ಧರಿಸೋದಿಲ್ಲ. ಆದ್ರೆ ಶೇಕಡಾ 18ರಷ್ಟು ಪುರುಷರು ತೊಳೆಯದ ಒಳ ಉಡುಪನ್ನು ಪದೇ ಪದೇ ಧರಿಸಲು ಇಷ್ಟಪಡ್ತಾರಂತೆ.

ಸಮೀಕ್ಷೆ ವೇಳೆ ಈ ವಿಷಯವನ್ನು ಪುರುಷರು ಒಪ್ಪಿಕೊಂಡಿದ್ದಾರೆ. ಒಂದು ವಾರದವರೆಗೂ ಸ್ವಚ್ಛಗೊಳಿಸದ ಒಂದೇ ಒಳ ಉಡುಪನ್ನು ಬಳಸುವ ಪುರುಷರೂ ಇದ್ದಾರೆ. ಬೆಡ್ ಶೀಟ್ ತೊಳೆಯೋದು ಪುರುಷರಿಗಾಗದ ಮಾತು. ಸಾಮಾನ್ಯವಾಗಿ ಮಹಿಳೆಯರು ಮೂರು ವಾರಕ್ಕೊಮ್ಮೆ ಬೆಡ್ ಸೀಟ್ ಸ್ವಚ್ಛಗೊಳಿಸುತ್ತಾರೆ. ಹಾಗೆ ಶೇಕಡಾ 78 ಮಹಿಳೆಯರು ಸೋಪ್ ಹಚ್ಚಿ ಕೈ ತೊಳೆದ್ರೆ ಪುರುಷರ ಸಂಖ್ಯೆ ಶೇಕಡಾ 50ರಷ್ಟು ಮಾತ್ರ.

ಮಕ್ಕಳನ್ನು ಬೆಳೆಸುವ ರೀತಿಯೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮನೆಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಮಾಡುವ ಬೇಧ ಹಾಗೂ ಅವರು ಆಡುವ ಆಟ ದೊಡ್ಡವರಾದ ಮೇಲೆ ಇಂಥ ಬದಲಾವಣೆ ತರುತ್ತದೆಯಂತೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...