alex Certify ಇಲ್ಲಿದೆ ಜಪಾನಿಯನ್ನರ ‘ದೀರ್ಘಾಯುಷ್ಯ’ದ ಗುಟ್ಟು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಜಪಾನಿಯನ್ನರ ‘ದೀರ್ಘಾಯುಷ್ಯ’ದ ಗುಟ್ಟು…!

ಸೂರ್ಯೋದಯದ ನಾಡು ಜಪಾನ್‌ನ ಜನರು ಅತಿಹೆಚ್ಚು ವರ್ಷ ಬದುಕುತ್ತಾರಂತೆ..! ಎರಡನೇಯ ವಿಶ್ವಯುದ್ಧದ ನಂತರ ಜಪಾನ್‌ ನ ಜನರ ಆಯುಷ್ಯದಲ್ಲಿ ಇಳಿಕೆ ಕಂಡು ಬರಬಹುದು ಎಂಬ ಅಂದಾಜಿತ್ತು. ಆದರೆ ಹಾಗಾಗಲಿಲ್ಲ. ಬದಲಿಗೆ ಉಳಿದ ಎಲ್ಲ ದೇಶಗಳನ್ನ ಗಮನಿಸಿದರೆ ಜಪಾನಿನಲ್ಲಿಯೇ ದೀರ್ಘಾಯುಷಿಗಳ ಸಂಖ್ಯೆ ಹೆಚ್ಚು. ಹಾಗಾದರೆ ಈ ದೀರ್ಘಾಯುಷ ಪಡೆಯಲು ಜಪಾನಿಯರಿಗೆ ಹೇಗೆ ಸಾಧ್ಯ..? ಈ ಕೆಲವು ಕಾರಣಗಳನ್ನ ನೋಡಿ.

ಸಸ್ಯಾಹಾರ ಸೇವನೆ :

ಜಪಾನಿಯರ ಆಹಾರದಲ್ಲಿ ತರಕಾರಿಗಳ ಬಳಕೆ ಹೆಚ್ಚು. ನಮ್ಮ ಭಾರತೀಯರಲ್ಲಿ ಹೆಚ್ಚು ಮಂದಿಗೆ ತರಕಾರಿಯನ್ನ ತಿನ್ನುವುದು ಇಷ್ಟವಿಲ್ಲದ ಸಂಗತಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಜಪಾನಿನ ಜನರು ತಮ್ಮ ಆಹಾರದಲ್ಲಿ ಅತಿಹೆಚ್ಚು ತರಕಾರಿಗಳನ್ನು ಬಳಸುತ್ತಾರೆ. ಇಲ್ಲಿಯ ಜನರಿಗೆ ಅಕ್ಕಿ, ತರಕಾರಿಗಳು ಮತ್ತು ಮೀನು ಅಂದರೆ ಅತೀ ಪ್ರೀತಿ. ಜಪಾನ್‌ನಲ್ಲಿ ಬಹಳ ಪ್ರಸಿದ್ಧವಾದ ಇನ್ನೊಂದು ವಿಷಯವೆಂದರೆ, ಸೋಯಾ ಮತ್ತು ಕಡಲೆಬೇಳೆ. ಇವು ಪೋಷಕಾಂಶಗಳನ್ನ ಹೆಚ್ಚಾಗಿ ನೀಡಬಲ್ಲವು. ಪಾಶ್ಚಿಮಾತ್ಯ ಆಹಾರದಲ್ಲಿ ಬ್ರೆಡ್‌, ಸಿಹಿತಿಂಡಿಗಳು ಮತ್ತು ಸಂಸ್ಕರಿಸಿದ ಸಕ್ಕರೆಗಳೇ ಹೆಚ್ಚಿರುತ್ತದೆ. ಆದರೆ ಜಪಾನ್‌ ಆಹಾರದಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಹೆಚ್ಚಿದ್ದು, ಕೆಟ್ಟ ಕೊಬ್ಬುಕಾರಕ ಪದಾರ್ಥಗಳ ಬಳಕೆ ತೀರಾ ಕಡಿಮೆ ಇದೆ.

ಆಹಾರ ಬೇಯಿಸುವ ವಿಭಿನ್ನ :

ಹಬೆಯಲ್ಲಿ ಬೇಯಿಸುವ, ಸುಡುವ, ತಂತಿಯ ಮೇಲಿಟ್ಟು ಬೇಯಿಸುವ, ಬಾಣಲೆಯಲ್ಲಿ ಹುರಿದು ತಯಾರು ಮಾಡುವ, ಹೀಗೆ ಇನ್ನೂ ಅನೇಕ ಬಗೆಯಲ್ಲಿ ಜಪಾನಿಯನ್ನರು ಆಹಾರವನ್ನ ತಯಾರಿಸಿಕೊಳ್ಳುತ್ತಾರೆ. ತಾವು ತಿನ್ನುವ ಆಹಾರದಲ್ಲಿಯ ಪೋಷಕಾಂಶಗಳಿಗೆ ಧಕ್ಕೆ ಬಾರದಂತೆ ಆಹಾರ ತಯಾರಿಸಿಕೊಳ್ಳುತ್ತಾರೆ. ಪ್ರತಿದಿನ ಬೇಯಿಸಿದ ತರಕಾರಿ ಮತ್ತು ಮೀನುಗಳನ್ನು ಅಕ್ಕಿಯ ಆಹಾರದೊಂದಿಗೆ ಸೇವಿಸುತ್ತಾರೆ.

ಚಹಾವನ್ನು ಕುಡಿಯುತ್ತಾರೆ ಜಪಾನಿಯನ್ನರು :

ಜಪಾನಿನಲ್ಲಿ ಚಹಾವನ್ನು ಸಾಮಾನ್ಯವಾಗಿ ಎಲ್ಲರೂ ಕುಡಿಯುತ್ತಾರೆ. ಚಹಾ ಜಪಾನ್‌ ಸಂಸ್ಕೃತಿಯ ಪ್ರತೀಕ ಎನ್ನಬಹುದು ಅಷ್ಟರಮಟ್ಟಿಗೆ ಜಪಾನ್‌ ಮತ್ತು ಚಹಾಕ್ಕೆ ನಂಟಿದೆ. ವಿವಿಧ ವಿಧದ ಚಹಾವನ್ನು ಮನೆಯಲ್ಲಿಯೇ ತಯಾರಿಸುವ ಇವರು ದಿನದಲ್ಲಿ ಹಲವು ಬಾರಿ ಚಹಾ ಕುಡಿಯುತ್ತಾರಂತೆ. ಅವುಗಳಲ್ಲಿಯೇ ಜಪಾನಿಯನ್ನರು ಅತಿ ಹೆಚ್ಚು ಸೇವಿಸುವ ಚಹಾ ಅಂದರೆ ಅದು ಗ್ರೀನ್‌ ಟೀ. ಅಲ್ಲಲ್ಲಿ ನಡೆಯುವ ಟೀ ಪಾರ್ಟಿಗಳಲ್ಲಿಯೂ ಕೂಡ ಜಪಾನಿಯನ್ನರು ಗ್ರೀನ್‌ ಟೀಯನ್ನೇ ತಯಾರಿಸಿರುತ್ತಾರೆ. ಹಲವು ಪ್ರಬೇಧದ ಗ್ರೀನ್‌ ಟೀಗಳನ್ನ ಕುಡಿಯುವ ಜಪಾನಿಯನ್ನರ ಚರ್ಮ ಕಾಂತಿ ಹೀನವಾಗುವುದೇ ಇಲ್ಲ. ವೃದ್ಧಾಪ್ಯದಲ್ಲಿಯೂ ಕೂಡ ಜಪಾನಿಯನ್ನರು ಯೌವ್ವನದಷ್ಟೇ ಕಾಂತಿಯುಕ್ತ ಚರ್ಮವನ್ನ ಹೊಂದಿರುತ್ತಾರೆ.

ತಾಜಾ ಆಹಾರಗಳ ಸೇವನೆ :

ಜಪಾನ್‌ನಲ್ಲಿ ತಾಜಾ ಆಹಾರಗಳ ಸೇವನೆಗೆ ಅತಿ ಹೆಚ್ಚು ಒತ್ತು ನೀಡಲಾಗುತ್ತದೆ. ಜಪಾನ್ ಮಾರುಕಟ್ಟೆಯಲ್ಲಿ ದೊರಕುವ ಆಹಾರಗಳ ಪೊಟ್ಟಣಗಳ ಮೇಲೆ ಅವಧಿ ಮುಗಿಯುವ ದಿನಾಂಕ ಅಥವಾ ತಿಂಗಳುಗಳ ಜತೆಗೆ ಸಮಯವನ್ನೂ ಕೂಡ ನಮೂದಿಸಿರುತ್ತಾರೆ. ಅಲ್ಲದೆ ಹವಾಮಾನಕ್ಕೆ ತಕ್ಕಂತೆ ಜಪಾನ್‌ನಲ್ಲಿ ಆಹಾರ ಸೇವಿಸಲಾಗುತ್ತದೆ. ಅಲ್ಲದೆ ಊಟಕ್ಕೆ ಸಣ್ಣ ತಟ್ಟೆಯನ್ನ ಮಾತ್ರ ಬಳಸಲಾಗುತ್ತದೆ. ಜಪಾನೀಯರಲ್ಲಿ ತಮ್ಮ ಹೊಟ್ಟೆಯ ಸಾಮರ್ಥ್ಯದ 80% ಮಾತ್ರ ತಿನ್ನಬೇಕು ಎಂಬ ಶಿಷ್ಟಾಚಾರವಿದೆ. ಹೀಗಾಗಿ ಜಪಾನ್‌ನಲ್ಲಿ ಹೊಟ್ಟೆ ಬಿರಿಯುವಂತೆ ಯಾರೂ ಊಟ ಮಾಡುವುದಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...