alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ನಂತರ ದಂಪತಿ ವಿಚ್ಛೇದನ ಪಡೆಯೋದ್ಯಾಕೆ?

ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ವಿಚ್ಛೇದನ ಸಹಜ ಎಂಬಂತಾಗಿಬಿಟ್ಟಿದೆ. ಅದರಲ್ಲೂ ಹನಿಮೂನ್ ಮುಗಿಸಿ ವಾಪಸ್ ಬರ್ತಿದ್ದಂತೆ ದೂರವಾಗುವವರ ಸಂಖ್ಯೆ ಹೆಚ್ಚು. ಕಳೆದ ತಿಂಗಳು ಕೂಡ ಇಂಥದ್ದೇ ಘಟನೆ ನಡೆದಿದೆ.

ಮದುವೆ ಮುಗಿಸಿ ಯುವ ಜೋಡಿ ಬಾಲಿಗೆ ಹನಿಮೂನ್ ಗಾಗಿ ತೆರಳಿದ್ದರು. ಆದ್ರೆ ಅವರ 10 ದಿನಗಳ ಪ್ರವಾಸ ಕೇವಲ 3 ದಿನಗಳಿಗೆ ಮೊಟಕುಗೊಂಡಿದೆ. ಬಾಲಿಯಿಂದ ವಾಪಸ್ಸಾಗಿದ್ದೇ ತಡ ದಂಪತಿ ಪರಸ್ಪರ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ವಧು-ವರ ಇಬ್ಬರೂ ಬೇರೆಯವರನ್ನೇನೂ ಪ್ರೀತಿಸುತ್ತಿಲ್ಲ.

ಆದ್ರೆ ತಮ್ಮಿಬ್ಬರ ಮಧ್ಯೆ ಬಾಂಧವ್ಯ ಬೆಸೆಯುತ್ತಿಲ್ಲ, ಪರಸ್ಪರ ಆತ್ಮೀಯತೆಯೇ ಮೂಡುತ್ತಿಲ್ಲ ಅನ್ನೋದು ಅವರ ವಾದ. ಅಷ್ಟೇ ಅಲ್ಲ ಲೈಂಗಿಕ ಸಂಬಂಧಕ್ಕಾಗಿ ಪತ್ನಿ ತನ್ನನ್ನು ಪ್ರಚೋದಿಸಲು ವಿಫಲಳಾಗಿದ್ದಾಳೆ ಅನ್ನೋದು ಪತಿಯ ಆರೋಪ. ಕಳೆದ 3 ವರ್ಷಗಳಲ್ಲಿ ಈ ರೀತಿ ಹನಿಮೂನ್ ಡೈವೋರ್ಸ್ ಹೆಚ್ಚುತ್ತಿದೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು.

ಇದು ಕೇವಲ ಅರೇಂಜ್ಡ್ ಮ್ಯಾರೇಜ್ ಗಳಲ್ಲಿ ಬರುವ ಸಮಸ್ಯೆ ಎಂದುಕೊಳ್ಳಬೇಡಿ. ಪ್ರೀತಿಸಿ ಮದುವೆಯಾದ್ರೆ ಲೈಂಗಿಕ ಆಸಕ್ತಿಗಳು ಕೂಡ ಹೊಂದಿಕೊಳ್ಳುತ್ತವೆ ಎಂಬ ಭಾವನೆ ತಪ್ಪು. ಪ್ರೀತಿಸಿ ಮದುವೆಯಾದವರು ಕೂಡ ವಿಚ್ಛೇದನದ ಮೊರೆ ಹೋಗುತ್ತಾರೆ. ಮೂರ್ನಾಲ್ಕು ವರ್ಷ ಡೇಟಿಂಗ್ ಮಾಡಿ, ಇಷ್ಟಪಟ್ಟು ಮದುವೆಯಾಗಿ ಹನಿಮೂನ್ ನಂತರ ಬೇರೆಯಾದವರೂ ಇದ್ದಾರೆ.

ಸೆಕ್ಸ್ ಬಗ್ಗೆ ಕುತೂಹಲದ ಜೊತೆಗೆ ಆತಂಕ ಕೂಡ ಇರುವುದು ಸಹಜ. ಈ ಭಯವೇ ಒಮ್ಮೊಮ್ಮೆ ದಾಂಪತ್ಯಕ್ಕೆ ಮುಳ್ಳಾಗಿಬಿಡುತ್ತದೆ. ಹಳೆಯ ಸಂಬಂಧಗಳು, ಪರಸ್ಪರರ ಮೇಲಿನ ಅಪನಂಬಿಕೆ, ಅತಿಯಾದ ನಿರೀಕ್ಷೆ, ಮುಚ್ಚುಮರೆ ಮಾಡುವುದು ಇವೆಲ್ಲವೂ ವಿಚ್ಛೇದನಕ್ಕೆ ಕಾರಣವಾಗಬಲ್ಲವು. ಕುಟುಂಬದವರ ಅತಿಯಾದ ಮಧ್ಯಪ್ರವೇಶ ಕೂಡ ಕಿರಿಕಿರಿ ಉಂಟುಮಾಡುತ್ತದೆ. ಪತ್ನಿ ಪದೇ ಪದೇ ತವರಿಗೆ ಹೋಗುತ್ತಾಳೆ ಅನ್ನೋ ಕಾರಣಕ್ಕೆ ದೆಹಲಿಯಲ್ಲಿ ಯುವಕನೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...