alex Certify
ಕನ್ನಡ ದುನಿಯಾ       Mobile App
       

Kannada Duniya

ಮುಟ್ಟಿನ ರಕ್ತವನ್ನು ಮುಖಕ್ಕೆ ಹಚ್ಚಿಕೊಂಡಿದ್ದಾಳೆ ಈಕೆ…!

ಈಗ್ಲೂ ನಮ್ಮ ದೇಶದ ಅನೇಕ ಕಡೆ ಮುಟ್ಟಿನ ಸಮಯದಲ್ಲಿ ಹುಡುಗಿಯರು ಮನೆಯಿಂದ ಹೊರಗಿರ್ತಾರೆ. ದೇವರ ಮನೆ ಹಾಗೂ ಅಡುಗೆ ಮನೆಗೆ ಅವ್ರ ಪ್ರವೇಶ ನಿಶಿದ್ಧ. ಮುಟ್ಟಿನ ಸಮಯದಲ್ಲಿ ಮಹಿಳೆಯನ್ನು ಅಶುದ್ಧ ಎನ್ನುವಂತೆ ನೋಡಲಾಗುತ್ತದೆ.

ಮುಟ್ಟಿನಲ್ಲಿ ಮಹಿಳೆ ಅಶುದ್ಧಳಾಗಲು ಸಾಧ್ಯವೇ ಇಲ್ಲ. ಕೈ ಬೆರಳು ಕತ್ತರಿಸಿದಾಗ ಬರುವ ರಕ್ತವೇ ಮುಟ್ಟಿನ ಸಮಯದಲ್ಲಿ ಹೊರಗೆ ಬರುತ್ತದೆ. ರಕ್ತ ಗರ್ಭಾಶಯದಿಂದ ಹೊರಗೆ ಬರುವುದ್ರಿಂದ ಅದನ್ನು ಅಶುದ್ಧವೆನ್ನಲಾಗುತ್ತದೆ. ಈ ತಪ್ಪು ಕಲ್ಪನೆ ಹೋಗಲಾಡಿಸಲು ಆಸ್ಟ್ರೇಲಿಯಾದ ಹುಡುಗಿಯೊಬ್ಬಳು ವಿಭಿನ್ನ ಕೆಲಸ ಮಾಡಿದ್ದಾಳೆ.

ಮುಟ್ಟಿನಲ್ಲಾದ ರಕ್ತಸ್ರಾವವನ್ನು ಮುಖಕ್ಕೆ ಹಚ್ಚಿಕೊಂಡಿದ್ದಾಳೆ. ಆಸ್ಟ್ರೇಲಿಯಾದ ಮಾಜಿ ಕೇಶ ವಿನ್ಯಾಸಕಿ ಯಝ್ಮಿನಾ ಜೇಡ್ ಈ ಕೆಲಸಕ್ಕೆ ಕೈ ಹಾಕಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಅದ್ರ ಫೋಟೋ ಹಾಕಿರುವ ಜೇಡ್ ಮುಟ್ಟಿನ ವೇಳೆ ಬರುವ ರಕ್ತ ಅಶುದ್ಧವಲ್ಲ ಎಂದಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಈಕೆ ಫೋಟೋಗೆ ಟೀಕೆಗಳು ವ್ಯಕ್ತವಾಗ್ತಿವೆ. ಪಬ್ಲಿಸಿಟಿಗಾಗಿ ಜೇಡ್ ಹೀಗೆ ಮಾಡಿದ್ದಾಳೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...