alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವೀಯತೆಯ ದರ್ಶನ ಮಾಡಿಸಿತ್ತು ಭಾರತದ ಮಹಿಳಾ ಕಬಡ್ಡಿ ತಂಡ

hijab600_1477

ಕ್ರೀಡಾಸ್ಪೂರ್ತಿ ಅನ್ನೋದು ಗೆಲುವಿಗಿಂತ್ಲೂ ದೊಡ್ಡದು. ಎದುರಾಳಿಗೆ ನೀವು ಕೊಡುವ ಗೌರವ ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. 2014 ರ ಏಷ್ಯನ್ ಗೇಮ್ಸ್ ಮಹಿಳಾ ಕಬಡ್ಡಿ ಪಂದ್ಯದಲ್ಲಿ ಅಂಥದ್ದೊಂದು ಘಟನೆ ನಡೆದಿತ್ತು.

ಫೈನಲ್ ನಲ್ಲಿ ಭಾರತ- ಇರಾನ್ ಮುಖಾಮುಖಿಯಾಗಿದ್ವು. ಇರಾನ್ ರೈಡರ್ ಒಬ್ಬಳ ಹಿಜಬ್ ಕಳಚಿ ಹೋಗಿತ್ತು, ಹಿಜಬ್ ಧರಿಸುವುದು ಅವರ ಸಂಪ್ರದಾಯ, ಅದು ಸ್ಥಳಾಂತರವಾಗಿದ್ದರಿಂದ ಆಕೆ ಮುಜುಗರಗೊಂಡಿದ್ಲು, ಇದರಿಂದ ಎದುರಾಳಿಗಳ ಕೈಗೆ ಸುಲಭವಾಗಿ ಸಿಕ್ಕಿಬೀಳುವ ಸಾಧ್ಯತೆ ಇತ್ತು.

ಆದ್ರೆ ವಿಶಾಲ ಮನೋಭಾವದ ಭಾರತೀಯ ಆಟಗಾರ್ತಿಯರು ಆಕೆಗೆ ಹಿಜಬ್ ಅನ್ನು ಮರಳಿ ಧರಿಸಲು ಸಹಾಯ ಮಾಡಿದ್ರು. ಮಿಲಿಯನ್ ಗಟ್ಟಲೆ ಪದಗಳಲ್ಲೂ ವರ್ಣಿಸಲಾಗದಂತಹ ಗೌರವ ಇದು. ಕೆಲವೊಮ್ಮೆ ನಾವು ಗೆಲುವಿನ ಖುಷಿಯಲ್ಲಿ ಎದುರಾಳಿಗೆ ಕನಿಷ್ಠ ಶೇಕ್ ಹ್ಯಾಂಡ್ ಮಾಡಬೇಕೆಂಬುದನ್ನೂ ಮರೆತುಬಿಡುತ್ತೇವೆ. ಆದ್ರೆ ಈ ಘಟನೆ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ತೋರಿಸಿಕೊಟ್ಟಿದೆ. ಅಂತಿಮವಾಗಿ ಭಾರತದ ವನಿತೆಯರು ಪಂದ್ಯವನ್ನು ಗೆದ್ದರು, ಈ ಜಯಕ್ಕಿಂತಲೂ ಅವರು ಮೆರೆದ ಕ್ರೀಡಾ ಸ್ಪೂರ್ತಿ ಎಲ್ಲರ ಮನಸ್ಸನ್ನೂ ಗೆದ್ದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...