alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗ್ರ ಈ ಅಂಗವನ್ನು ಮೊದಲು ನೋಡ್ತಾರೆ ಹುಡುಗಿಯರು

ಹುಡುಗಿಯರ ಯಾವ ಅಂಗದ ಮೇಲೆ ಹುಡುಗ್ರ ಕಣ್ಣಿರುತ್ತೆ ಎಂಬುದರ ಬಗ್ಗೆ ಅನೇಕ ಸಮೀಕ್ಷೆಗಳನ್ನು ನಡೆಸಲಾಗಿದೆ. ಈಗ ಹುಡುಗ್ರ ಯಾವ ಅಂಗ ಹುಡುಗಿಯರನ್ನು ಆಕರ್ಷಿಸುತ್ತದೆ ಎಂಬ ಬಹುದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹುಡುಗ್ರ ಸೆಕ್ಸಿ ಲುಕ್ ಹಾಗೂ ಮೈಮಾಟಕ್ಕೆ ಹುಡುಗಿಯರು ಬೀಳೋದಿಲ್ಲ. ಹುಡುಗ್ರ ಕಣ್ಣು, ಸಿಕ್ಸ್ ಪ್ಯಾಕ್, ಆಕರ್ಷಕ ಕೂದಲಿಗಿಂತ ಮೊದಲು ಹುಡುಗಿಯರು ಹುಡುಗ್ರ ಬೇರೆ ಅಂಗವನ್ನು ನೋಡ್ತಾರಂತೆ.

ಸಂಶೋಧನೆ ಪ್ರಕಾರ ಹುಡುಗಿಯರು ಮೊದಲು ನೋಡೋದು ಹುಡುಗ್ರ ಹೊಟ್ಟೆಯನ್ನ. ಹುಡುಗ ಎಷ್ಟೇ ಸುಂದರವಾಗಿರಲಿ ಇಲ್ಲ ಒಳ್ಳೆ ವ್ಯಕ್ತಿತ್ವ ಹೊಂದಿರಲಿ. ಎಲ್ಲಕ್ಕಿಂತ ಮೊದಲು ಹುಡುಗಿಯರು ನೋಡೋದು ಹೊಟ್ಟೆಯನ್ನ ಎಂದು ಜಿನೀವಾ ಯುನಿವರ್ಸಿಟಿ ಹಾಸ್ಪಿಟಲ್ ಸಂಶೋಧಕರು ಹೇಳಿದ್ದಾರೆ.

ಇದ್ರಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಹಾಗೂ ಪುರುಷರಿಗೆ 120 ಫೋಟೋಗಳನ್ನು ತೋರಿಸಲಾಗಿತ್ತು. ಲೈಂಗಿಕ ದೃಷ್ಟಿಕೋನದಿಂದ ಫೋಟೋ ನೋಡುವಂತೆ ಹೇಳಲಾಗಿತ್ತು. ಇದ್ರಲ್ಲಿ ಪಾಲ್ಗೊಂಡಿದ್ದ ಅತಿ ಹೆಚ್ಚು ಮಹಿಳೆಯರು ಹುಡುಗರ ಮುಖ ಹಾಗೂ ಎದೆ ಭಾಗಕ್ಕಿಂತ ಹೆಚ್ಚಾಗಿ ಅವ್ರ ಹೊಟ್ಟೆ ನೋಡಿದ್ದರು.

ಇನ್ನು ಪುರುಷರು ಹುಡುಗಿಯರ ಸ್ತನ ಹಾಗೂ ಹೊಟ್ಟೆ ಕೆಳಗಿನ ಭಾಗವನ್ನು ನೋಡಿದ್ದರು. ಶಾರೀರಿಕ ಸಂಬಂಧ ಬೆಳೆಸುವ ವಿಷ್ಯ ಬಂದಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರೂ ಮುಖಕ್ಕಿಂತ ದೇಹದ ಭಾಗಕ್ಕೆ ಹೆಚ್ಚು ಮಹತ್ವ ನೀಡ್ತಾರೆಂದು ಸಂಶೋಧನೆ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...